ಹಾಸನದಲ್ಲಿ ಹಾಡಹಗಲೇ ಬಿಜೆಪಿ ಕಾರ್ಯಕರ್ತನನ್ನು ಅಟ್ಟಾಡಿಸಿ ಹೊಡೆದಿದ್ದ ಮುಖಂಡನ ಬಂಧನ

ಹಾಸನದಲ್ಲಿ ಹಾಡಹಗಲೇ ಬಿಜೆಪಿ ಕಾರ್ಯಕರ್ತನನ್ನು ಅಟ್ಟಾಡಿಸಿ ಹೊಡೆದಿದ್ದ ಮುಖಂಡನ ಬಂಧನ

ಹಾಸನ : ಹಾಡಹಗಲೇ ಬಿಜೆಪಿ ಕಾರ್ಯಕರ್ತನನ್ನು ಅಟ್ಟಾಡಿಸಿ ಹೊಡೆದಿದ್ದ ಬಿಜೆಪಿ ಮುಖಂಡ ವಿಜಯ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಹಾಡಹಗಲೇ ಸ್ವಪಕ್ಷೀಯ ಕಾರ್ಯಕರ್ತನ ಮೇಲೆ ಬಿಜೆಪಿ ನಾಯಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ನಗರಸಭೆ ಎದುರು ನಡೆದಿತ್ತು.

ಇದೀಗ ಈತನನ್ನು ಹಾಸನ ಜಿಲ್ಲೆ ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಕುಮಾರ್ ಮೇಲೆ ಅರಸೀಕೆರೆ ಗ್ರಾಮಾಂತರ ತಾಲೂಕು ಘಟಕದ ಬಿಜೆಪಿ ಅಧ್ಯಕ್ಷ ವಿಜಯ್ ಎಂಬಾತ ಹಲ್ಲೆ ನಡೆಸಿದ್ದನು. ಕಾರು ಚಾಲಕ, ಬೆಂಬಲಿಗರ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದನು ಎಂದು ತಿಳಿದು ಬಂದಿದೆ.ಹಳೇ ವೈಷಮ್ಯದ ಹಿನ್ನೆಲೆ ವಿಜಯ್ ತನ್ನ ಕಾರು ಚಾಲಕ, ಬೆಂಬಲಿಗರ ಜೊತೆ ಸೇರಿ ಕುಮಾರ್ ಮೇಲೆ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದನು. ಹಾಡಹಗಲೇ ಅರಸೀಕೆರೆ ನಗರಸಭೆ ಎದುರು ಕುಮಾರ್ ನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ. ಘಟನೆಯಲ್ಲಿ ಕುಮಾರ್ ಗೆ ತೀವ್ರತರವಾದ ಗಾಯಗಳಾಗಿತ್ತು.