ʻನಮ್ಮ ಮೆಟ್ರೋʼದಲ್ಲೂ ಶೀಘ್ರದಲ್ಲೇ ʻಕಾಮನ್ ಮೊಬಿಲಿಟಿ ಕಾರ್ಡ್ ʼಜಾರಿ: ಮೆಟ್ರೋ ನಿಗಮ ಘೋಷಣೆ

ʻನಮ್ಮ ಮೆಟ್ರೋʼದಲ್ಲೂ ಶೀಘ್ರದಲ್ಲೇ ʻಕಾಮನ್ ಮೊಬಿಲಿಟಿ ಕಾರ್ಡ್ ʼಜಾರಿ: ಮೆಟ್ರೋ ನಿಗಮ ಘೋಷಣೆ

ಬೆಂಗಳೂರು : ʻನಮ್ಮ ಮೆಟ್ರೋ ʼ ಪ್ರಯಾಣಿಕರಿಗೆ ಇದು ಸಿಹಿಸುದ್ದಿ. ಪ್ರಯಾಣಿಕರ ಅನುಕೂಲಕ್ಕಾಗಿ ಸಿಲಿಕಾನ್‌ ಸಿಟಿಯಲ್ಲೂ ಶೀಘ್ರದಲ್ಲಿಯೇ ʻಕಾಮನ್ ಮೊಬಿಲಿಟಿ ಕಾರ್ಡ್ (ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್) ಜಾರಿʼ ತರಲಾಗುತ್ತದೆಂದು ಮೆಟ್ರೋ ನಿಗಮ ಘೋಷಣೆ ಮಾಡಲಾಗಿದೆ.

ಕೇಂದ್ರ ಸರ್ಕಾರವು ಆರಂಭಿಸಿರುವ 'ಒಂದು ದೇಶ ಒಂದು ಕಾರ್ಡ್​' ಯೋಜನೆಯ ಭಾಗವಾಗಿʻಕಾಮನ್ ಮೊಬಿಲಿಟಿ ಹೊಸ ಕಾರ್ಡ್​ಗಳನ್ನು ಪರಿಚಯಿಸಲಾಗುವುದು ಎಂದು ಮೆಟ್ರೋ ನಿಗಮ ತಿಳಿಸಿದೆ. ಇನ್ಮುಂದೆ ಪ್ರಯಾಣಿಕರು ಒಂದೇ ಕಾರ್ಡ್ ಅನ್ನು ಬಿಎಂಟಿಸಿ ಬಸ್ ಹಾಗೂ ಮೆಟ್ರೋ ರೈಲಿಗೆ ಸೇರಿದಂತೆ ಹಲವು ಸಾರಿಗೆ ವ್ಯವಸ್ಥೆಗಳಲ್ಲಿ ಬಳಸಬಹುದಾಗಿದೆ.

ಕಳೆದ ಡಿಸೆಂಬರ್ 2022ರಲ್ಲಿ ಮೆಟ್ರೋ ರೈಲುಗಳಲ್ಲಿ 1.69 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ನಿಗಮವು ₹ 40.30 ಕೋಟಿ ಆದಾಯ ಪಡೆದಿತ್ತು. ಹೊಸ ವರ್ಷಾಚರಣೆಯ ದಿನ (ಡಿ 31-ಜ1) ಅತಿಹೆಚ್ಚು ಪ್ರಯಾಣಿಕರು (6.41 ಲಕ್ಷ) ಮೆಟ್ರೋ ರೈಲುಗಳಲ್ಲಿ ಸಂಚರಿಸಿದ್ದರು. ಈಗಾಗಲೇ ಈ ಕಾರ್ಡ್‌ಗಳನ್ನುಈ ತಿಂಗಳಿನಲ್ಲಿ ಮುಂಬೈನ ಮಹಾ ನಗರದಲ್ಲೂ ಬಳಕೆಯಲ್ಲಿವೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್ ಜಾರಿಗೆ ಯಾವಾಗ ಬರುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ. ಇದರ ಸದುಪಯೋಗವನ್ನು ಸಿಟಿ ಜನರು ಪಡೆಯುವುದಂತೂ ಗ್ಯಾರಂಟಿಯಾಗಿದೆ.