ವಿಜಯಪುರ ಜಿಲ್ಲೆಯಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ವಿಜಯಪುರ : ವಿದ್ಯುತ್ ಕಾಮಗಾರಿ ಹಿನ್ನೆಲೆ ವಿಜಯಪುರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
110/33/11 ಕೆ.ವಿ ಮುದ್ದೇಬಿಹಾಳ ವಿದ್ಯುತ್ ವಿತರಣಾ ಉಪಕೇಂದ್ರಗಳಿಂದ ವಿದ್ಯುತ್ ಸರಬರಾಜು ಹೊಂದುವ ಎಲ್ಲಾ ಗ್ರಾಮಗಳಿಗೆ, ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ.
ಈ ಹಿನ್ನೆಲೆ ಮುದ್ದೇಬಿಹಾಳ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು, ಮತ್ತು ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಮಾಹಿತಿ ನೀಡಿದ್ದಾರೆ.
ಸುವರ್ಣಸೌಧದ ಎದುರು ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ , ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ಸಿಎಂ
ಬೆಳಗಾವಿ : ವಿಧಾನಸಭೆ ಚುನಾವಣೆ ಹೊತ್ತಲ್ಲಿ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಕಡೆ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಸುವರ್ಣಸೌಧದ ಎದುರು ನಗರದ ಸುವರ್ಣಸೌಧದ ಎದುರು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಪ್ರತಿಮೆಯನ್ನು ಸಿಎಂ ಬೊಮ್ಮಾಯಿ ಅನಾವರಣಗೊಳಿಸಿದರು.
ಬೆಳಗಾವಿ ಯಾವಾಗಲೂ ಐತಿಹಾಸಿಕ ಪ್ರಸಿದ್ದ ಜಿಲ್ಲೆಯಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂರ್ತ್ಯದ ಮೊದಲ ಕಹಳೆ ಮೊಳಗಿಸಿದ್ದರು. ಅಂಬೇಡ್ಕರ್ ಮೊದಲು ಭೇಟಿ ನೀಡಿದ್ದು ಚಿಕ್ಕೋಡಿ ವಿಭಾಗಕ್ಕೆ ಎಂದರು. ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ದಿ ಕೆಲಸ ಆಗಬೇಕು, ಈ ಕಾರಣಕ್ಕೆ ನಾನು ಅಧಿವೇಶನ ವೇಳೆ 5,500 ಕೋಟಿ ರೂ ವೆಚ್ಚದ ನೀರಾವರಿ ಯೋಜನೆಗಳನ್ನು ಘೋಷಿಸಿದ್ದೆ ಎಂದರು.