ಹಬ್ಬಗಳ ಉಲ್ಲಾಸ ಮತ್ತು ಸಂಭ್ರಮವನ್ನು ಹರಡುವುದು ನಮ್ಮ ಕರ್ತವ್ಯ - ಸಾಹಿತಿ ಮಾರ್ತಾಂಡಪ್ಪ ಕತ್ತಿ

ಹಬ್ಬಗಳ ಉಲ್ಲಾಸ ಮತ್ತು ಸಂಭ್ರಮವನ್ನು ಹರಡುವುದು ನಮ್ಮ ಕರ್ತವ್ಯ - ಸಾಹಿತಿ ಮಾರ್ತಾಂಡಪ್ಪ ಕತ್ತಿ

 ಹಬ್ಬಗಳು ಕೇವಲ ಸಂತೋಷದಿಂದ ಆಚರಿಸಬೇಕಾದ ಕ್ಷಣಗಳಲ್ಲ. ಅವು ನಮ್ಮ ಅಸ್ತಿತ್ವದ ಬಗ್ಗೆ ನಾವು ಪ್ರತಿಬಿಂಬಿಸಬೇಕಾದ ಕ್ಷಣಗಳಾಗಿವೆ. ನಮ್ಮ ಜೀವನಕ್ಕೆ ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞರಾಗಿರಲು ಮತ್ತು ಕೃತಜ್ಞರಾಗಿರಲು ನಾವು ಇದನ್ನು ಒಂದು ಕ್ಷಣವಾಗಿ ತೆಗೆದುಕೊಳ್ಳಬೇಕಾಗಿದೆ. ನಾವು ನಮ್ಮ ಕೃತಜ್ಞತೆಯನ್ನು ಪ್ರತಿಬಿಂಬಿಸಬೇಕು ಮತ್ತು ಅನೇಕ ಜನರಿಗೆ ಸಹಾಯ ಮಾಡಬೇಕು ಮತ್ತು ಹಬ್ಬದ ಉದ್ದೇಶವನ್ನು ಸಮಾಜಕ್ಕೆ ನೆನಪಿಸಬೇಕು. ಹಬ್ಬಗಳ ಉಲ್ಲಾಸ ಮತ್ತು ಸಂಭ್ರಮವನ್ನು ಹರಡುವುದು ನಮ್ಮ ಕರ್ತವ್ಯ ಎಂಬುದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಸಾಹಿತಿ, ಸಂಘಟಕ ಮಾರ್ತಾಂಡಪ್ಪ ಕತ್ತಿ ಹೇಳಿದರು.
 ಅವರು ಅಸೋಷಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ ಇಂಜಿನಿರ‍್ಸ್ ಲೋಕಲ್ ಸೇಂಟರ್, ಧಾರವಾಡ ಇವರ ವತಿಯಿಂದ ಇಂಜಿನಿಯರ್ ಸಭಾಭವನದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಯುಗಾದಿಯ ಮಹತ್ವ ಮತ್ತು ಇಂದಿನ ಅವಶ್ಯಕತೆ ಕುರಿತು ಮಾತನಾಡುತ್ತಾ ಸಹೋದರತ್ವ, ಸಂಯಮದ ಬಾಂಧವ್ಯ, ಸ್ನೇಹದ ಮಧುರತೆ, ಅಮ್ಮ ನೀಡು ಮಮತೆ ಹೀಗೆ ಹಲವು ಬಣ್ಣದ ತಳಿರು ತೋರಣದ ಸಂಭ್ರಮ, ಹೋಳಿಗೆಯ ಸುವಾಸನೆ, ಬೇವಿನ ಹೂವಿನ ಕಂಪು ಬೆರೆತ ಬೆಲ್ಲ... ಇವುಗಳ ಮಧುರತ್ವವನ್ನು ಸಾರುವುದೇ ಯುಗಾದಿಯ ವಿಶೇಷ. ಅವುಗಳ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಇಂಜಿನಿಯರ್ ಶ್ರೀ ಸಿದ್ದನಗೌಡ ಪಾಟೀಲ ಇದ್ದರು.
 ಅಧ್ಯಕ್ಷತೆ ವಹಿಸಿದ್ದ ಅಸೋಷಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ ಇಂಜಿನಿರ‍್ಸ್ ಅಧ್ಯಕ್ಷರಾದ ಇಂಜಿನಿಯರ್ ಸುನೀಲ ಬಾಗೇವಾಡಿ ಮಾತನಾಡಿ ಬದÀÄಕಿನ ಹಳೆಯ ನೋವುಗಳನ್ನು ಮನಸ್ಸಿನಿಂದ ತೊಡೆದು ಹಾಕಿ ನವೋಲ್ಲಾಸದಿಂದ ಹೊಸ ವರ್ಷವನ್ನು ಹೊಸ ಉತ್ಸಾಹದಿಂದ ಸ್ವಾಗತಿಸುವ ಸುದಿನ ಈ ಯುಗಾದಿ ಎಂದು ಹಬ್ಬದ ಆಚರಣೆಯ ಕುರಿತು ಮಾತನಾಡಿದರು.          ಈ ಸಂಧರ್ಭದಲ್ಲಿ. ಪುಷ್ಪ ಬಸನಗೌಡರ, ವಿಜೇಂಧ್ರಗೌಡ ಪಾಟೀಲ, ಸಂಗೀತ ಬಾಗೇವಾಡಿ, ಕೋಮಲ ಅರುಣ ಶೀಲವಂತ, ರೇಷ್ಮಾ ಗೊಗಿ, ಸಹನಾ ದಾಮೋದರ, ಅಕ್ಷತಾ, ಚೇತನ ಹೆಗಡೆ, ಮಿಲನ ವಿಜಯ ತೋಟಗೆರ, ಅಮೃತಾ, ಜುಬೇರ ಅಬ್ಬಿಹಾಳ, ಕಬೀರ ನದಾಫ್, ಸತ್ಯನಾರಾಯಣ ಸಿಂಗ, ಮೈತ್ರಾ ವಿಜಯ ಹಳ್ಳಿಕೇರಿ, ಲಕ್ಷಮಿ ನಾಗರಾಜ , ಬಹದ್ದೂರ ದೇಸಾಯಿ, ರಮಾ, ಶಶಿಧರ, ಚಕ್ರವರ್ತಿ ಮತ್ತಿತರರು ಇದ್ದರು.
 ಶ್ರೀಮತಿ ಮಿಲನ ತೋಟಗೇರ ಸ್ವಾಗತ ಗೀತೆಯೊಂದಿಗೆ ಪ್ರಾರ್ಥಿಸಿದರು. ಇಂಜಿನಿಯರ್ ವಿಜಯ ತೋಟಗೇರ ಗಣ್ಯರನ್ನು ಸ್ವಾಗತಿಸಿದರು. ಇಂಜಿನಿಯರ್  ದಾಮೋದರ ಹೆಗಡೆ ನಿರೂಪಿಸಿದರು. ಇಂಜಿನಿಯರ್  ಸಂಜಯ ಕಬ್ಬೂರ ಅತಿಥಿಗಳನ್ನು ಪರಿಚಯಿಸಿದರು. ಇಂಜಿನಿಯರ್  ಅರುಣ ಶೀಲವಂತ ವಂದಿಸಿದರು.