ಸಂಕ್ರಾಂತಿ' ಯಾವಾಗ.? ಜನವರಿ 14ಕ್ಕಾ.? ಅಥ್ವಾ 15ಕ್ಕಾ.? ಯಾವ ದಿನ ಆಚರಿಸ್ಬೇಕು.? ಇಲ್ಲಿದೆ ಮಾಹಿತಿ

ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಹೊಸ ವರ್ಷದ ಆಚರಣೆಗಳು ಮುಗಿದಿದ್ದು, ಮಕರ ಸಂಕ್ರಾಂತಿ ಶೀಘ್ರದಲ್ಲೇ ಬರಲಿದೆ. ಆದ್ರೆ, ಈ ವರ್ಷ ಸಂಕ್ರಾಂತಿಯ ದಿನಾಂಕದ ಬಗ್ಗೆ ಜನರಲ್ಲಿ ಗೊಂದಲವಿದೆ. ಮಕರ ಸಂಕ್ರಾಂತಿಯನ್ನ ಜನವರಿ 14 ಅಥವಾ ಜನವರಿ 15 ರಂದು ಆಚರಿಸಲಾಗುತ್ತದೆಯೇ.?
ಮಕರ ಸಂಕ್ರಾಂತಿಯನ್ನ ಸೂರ್ಯನು ಮಕರ ರಾಶಿಯಲ್ಲಿ ಪ್ರವೇಶಿಸುವ ದಿನದಂದು ಸಂಕ್ರಾಂತಿ ಆಚರಿಸಲಾಗುತ್ತದೆ. ಈ ವರ್ಷ ಜನವರಿ 14 ರಂದು (ಶನಿವಾರ) ರಾತ್ರಿ 08.45ಕ್ಕೆ ಸೂರ್ಯ ಭಗವಂತ ಮಕರ ರಾಶಿಗೆ ಬರುತ್ತಾನೆ. ಹಾಗಾಗಿ ಮಕರ ಸಂಕ್ರಾಂತಿ ಮುಹೂರ್ತ ಜನವರಿ 14 ರಂದು ಬರಲಿದೆ. ಆದ್ರೆ, ಈ ಬಾರಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಸಮಯದಿಂದ ಮಕರ ಸಂಕ್ರಾಂತಿಯ ದಿನಾಂಕದ ಬಗ್ಗೆ ಗೊಂದಲವಿದೆ.
ಮಕರ ಸಂಕ್ರಾಂತಿ 2023 ಯಾವಾಗ?
ಪಂಚಾಂಗದ ಪ್ರಕಾರ, ಸೂರ್ಯನ ಮಕರ ಸಂಕ್ರಾಂತಿ ಮುಹೂರ್ತವು ಜನವರಿ 14ರ ಶನಿವಾರದಂದು ರಾತ್ರಿ 08:45ಕ್ಕೆ ಇರುತ್ತದೆ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಸ್ನಾನ ಮತ್ತು ದಾನಗಳನ್ನ ಮಾಡಲಾಗುತ್ತದೆ. ಆದ್ರೆ, ಸಂಕ್ರಾಂತಿ ಸ್ನಾನ ಮತ್ತು ದಾನವನ್ನ ರಾತ್ರಿಯಲ್ಲಿ ಮಾಡಬಾರದು. ಆದ್ದರಿಂದ ಉದಯತಿಥಿ ಎಂದರೆ ಸೂರ್ಯೋದಯವಾದಾಗ ಮಕರ ಸಂಕ್ರಾಂತಿ ಸ್ನಾನ ಮಾಡಬೇಕು ಎಂದು ಪಂಡಿತರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಮಕರ ಸಂಕ್ರಾಂತಿಯನ್ನ 15ನೇ ಜನವರಿ 2023 ಭಾನುವಾರದಂದು ಆಚರಿಸಲಾಗುವುದು ಎಂದು ಹೇಳಲಾಗಿದೆ.