ವಿವಾಹಕ್ಕೆ ನಿರಾಕರಿಸಿದ ಅಪ್ರಾಪ್ತೆಗೆ ಹಲ್ಲೆ: ಜುಟ್ಟು ಹಿಡಿದು ಎಳೆದೊಯ್ದ 47 ವರ್ಷದ ವ್ಯಕ್ತಿ

ವಿವಾಹಕ್ಕೆ ನಿರಾಕರಿಸಿದ ಅಪ್ರಾಪ್ತೆಗೆ ಹಲ್ಲೆ: ಜುಟ್ಟು ಹಿಡಿದು ಎಳೆದೊಯ್ದ 47 ವರ್ಷದ ವ್ಯಕ್ತಿ

ರಾಯ್ಪುರ: ಪ್ರೀತಿಯನ್ನು ನಿರಾಕರಿಸಿದ ಅಪ್ರಾಪ್ತೆಯನ್ನು ಚೂರಿಯಿಂದ ಹಲ್ಲೆ ಮಾಡಿ, ಜುಟ್ಟು ಹಿಡಿದು ಎಳೆದೊಯ್ದ ಘಟನೆ ಛತ್ತೀಸ್‌ ಗಡದ ರಾಯ್ಪುರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

47 ವರ್ಷದ ಓಂಕಾರ್ ತಿವಾರಿ 16 ವರ್ಷದ ಅಪ್ರಾಪ್ತೆಯನ್ನು ರಸ್ತೆ ಜುಟ್ಟು ಹಿಡಿದು ಎಳೆದೊಯ್ದಿದ್ದಾನೆ.

ಓಂಕಾರ್ ತಿವಾರಿ ಅವರ ಗುಧಿಯಾರಿ ಪ್ರದೇಶದಲ್ಲಿರುವ ದಿನಸಿ ಅಂಗಡಿಯಲ್ಲಿ ಯುವತಿ ಕೆಲಸ ಮಾಡಿಕೊಂಡಿದ್ದಳು. ಓಂಕಾರ್ ತಿವಾರಿ ಅಪ್ರಾಪ್ತೆಯನ್ನು ಮದುವೆಯಾಗಲು ಬಯಸಿದ್ದರು. ಇದನ್ನು ಯುವತಿ ಬಳಿ ಹೇಳಿದಾಗ ಆಕೆ, ಅದನ್ನು ನಿರಾಕರಿಸಿ ಕೆಲಸ ಬಿಟ್ಟಿದ್ದಾಳೆ.

ಇದೇ ಕಾರಣಕ್ಕೆ ಶನಿವಾರ (ಫೆ.18 ರಂದು) ರಾತ್ರಿ ಓಂಕಾರ್ ತಿವಾರಿ ಕುಡಿದ ಮತ್ತಿನಲ್ಲಿ ಯುವತಿಯನ್ನು ಮನೆಯಿಂದ ಹೊರಗೆ ಎಳೆದು, ಚೂರಿಯಿಂದ ಹಲ್ಲೆ ಮಾಡಿದ್ದಾನೆ. ತಪ್ಪಿಸಿಕೊಂಡು ಓಡಿದ ಯುವತಿಯ ಜಡೆ ಹಿಡಿದು ರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿ, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ರಸ್ತೆಯಲ್ಲಿ ಕುಸಿದು ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.