ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್‌ ವಾಗ್ದಾಳಿ

ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್‌ ವಾಗ್ದಾಳಿ

ಬೆಂಗಳೂರು : ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತ 10.5 ಲಕ್ಷ ನಗದು ಹಣ ಪತ್ತೆಯಾಗಿದ್ದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಬಳಿ ಇದ್ದ ಹಣ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟನೆ ಕುರಿತು ಕೆಪಿಸಿಸಿ ಅಧ್ಯಕ್ಷ ಪ್ರತಿಕ್ರಿಯೆ ನೀಡಿದ್ದು, ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ.ವಿಧಾನಸೌಧದಲ್ಲಿ ಶೇಕಡ.40ರಿಂದ 50%ರಷ್ಟು ಕಮಿಷನ್‌ ಪಡೀತಿದ್ದಾರೆ ಅನೇಕ ಮಾಹಿತಿಗಳು ನಮಗೆ ಬರುತ್ತಿದೆ. ಮಂತ್ರಿ ಮನೆಯಿಂದ ಕರೆ ಬಂತೆಂದು ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಇನ್ನೂ 60 ದಿನ ಮಾತ್ರ ಈ ಸರ್ಕಾರ ಏನು ಮಾಡ್ತಾರೆ ನೋಡೋಣ 40% ಕಮಿಷನ್‌ ಈ ದುಡ್ಡೆ ದಾಖಲೆ ಅಲ್ಲವೇ ಎಂದು ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಸಂಜೆ 7 ಗಂಟೆಗೆ ನಡೆದ ಘಟನೆ ಎಂದು ತಿಳಿದುಬಂದಿದೆ. ಮಂಡ್ಯ ಮೂಲದ ವ್ಯಕ್ತಿಯ ಬ್ಯಾಗ್ನಲ್ಲಿ ಹಣ ಪತ್ತೆಯಾಗಿದೆ. ಹಣ ಮೂಲ ಪ್ರಶ್ನೆ ಮಾಡಿದಾಗ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಬಳಿಕ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ಹಣ ಮೂಲಕ ಹುಡುಕುವಲ್ಲಿ ಪೊಲೀಸರು ಮುಂದಾಗಿದ್ದಾರೆ. ಯಾವ ಇಲಾಖೆ ಸಂಬಂಧಿಸಿದೆಂದು ಮಾಹಿತಿ ಲಭ್ಯವಾಗಿಲ್ಲ.