ರೋಣಪುರಕ್ಕೆ ಗಣ ಬರೋಕ್ಕೆ ಮುನ್ನ ಏನೇನಾಯ್ತು? 'ಭೈರತಿ ರಣಗಲ್' ಹಿಂದಿನ ಕಥೆಗೆ ಇಂದು ಮುನ್ನಡಿ

ರೋಣಪುರಕ್ಕೆ ಗಣ ಬರೋಕ್ಕೆ ಮುನ್ನ ಏನೇನಾಯ್ತು? 'ಭೈರತಿ ರಣಗಲ್' ಹಿಂದಿನ ಕಥೆಗೆ ಇಂದು ಮುನ್ನಡಿ

ನ್ನಡ ಚಿತ್ರರಸಿಕರು ಬಹಳ ದಿನಗಳಿಂದ ಕಾಯುತ್ತಿದ್ದ ಆ ಬ್ರೇಕಿಂಗ್ ನ್ಯೂಸ್ ಇಂದ ಸಿಗುತ್ತಿದೆ. ಇನ್ನು ಕೆಲವೇ ನಿಮಿಷಗಳಲ್ಲಿ 'ಭೈರತಿ ರಣಗಲ್' ಪ್ರೀಕ್ವೆಲ್ ಅನೌನ್ಸ್ ಆಗಲಿದೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರುತ್ತಿರುವುದು ಮತ್ತೊಂದು ವಿಶೇಷ.

5 ವರ್ಷಗಳ ಹಿಂದೆ ತೆರೆಕಂಡಿದ್ದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನರ್ತನ್ ನಿರ್ದೇಶನದಲ್ಲಿ ಶಿವಣ್ಣ- ಶ್ರೀಮುರಳಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದರು. ಇಂಟರ್‌ವಲ್ ನಂತರ ಭೈರತಿ ರಣಗಲ್ ಆಗಿ ದರ್ಶನ ಕೊಟ್ಟಿದ್ದ ಶಿವಣ್ಣ ಅಭಿಮಾನಿಗಳ ಮೈ ಜುಮ್ ಎನ್ನುವಂತೆ ಮಾಡಿದ್ದರು. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸಖತ್ ಕಿಕ್ ಕೊಟ್ಟಿತ್ತು. ನೋಡಲು ಬಹಳ ಕ್ರೂರಿಯಂತೆ ಕಂಡರೂ ಅಂತರಾಳದಲ್ಲಿ ಕಷ್ಟಕ್ಕೆ ಕರಗುವ, ನೋವಿನ ಮಿಡಿಯುವ ಬೈರತಿ ರಣಗಲ್ ಪಾತ್ರ ಪೋಷಣೆ ಸೊಗಸಾಗಿತ್ತು. ಇನ್ನು ಶಿವಣ್ಣ ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ ಕಾಸ್ಟ್ಯೂಮ್‌ನಲ್ಲಿ ಕಣ್ಣುಗಳಲ್ಲೇ ನಟಿಸಿ ಗೆದ್ದಿದ್ದರು.