ಚೀನ ಉದ್ಯಮಿ ಬಾವೋ ಫಾನ್‌ ನಾಪತ್ತೆ

ಚೀನ ಉದ್ಯಮಿ ಬಾವೋ ಫಾನ್‌ ನಾಪತ್ತೆ

ಬೀಜಿಂಗ್‌: ಚೀನದ ಪ್ರಮುಖ ಉದ್ಯಮಿ ಮತ್ತು ಚೀನ ರೆನೇಸಾನ್ಸ್‌ ಹೋಲ್ಡಿಂಗ್ಸ್‌ನ ಸಿಇಒ ಬಾವೋ ಫಾನ್‌ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಅವರು ಎಷ್ಟು ದಿನಗಳಿಂದ ಸಂಪರ್ಕಕ್ಕೆ ಲಭ್ಯರಾಗಿಲ್ಲ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಆದರೆ, ಅವರ ಕಚೇರಿಯ ಅಧಿಕಾರಿಗಳ ಪ್ರಕಾರ 2 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಅವರ ಕಂಪನಿಯ ಷೇರುಗಳು ಶುಕ್ರವಾರ ಕುಸಿದಿವೆ.

ದೊಡ್ಡ ಉದ್ದಿಮೆಗಳು, ಟೆಕ್‌ ಕಂಪನಿಗಳ ವಿರುದ್ಧ ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ ಬಳಿಕ ಚೀನದ ಅಗ್ರಗಣ್ಯ ಶ್ರೀಮಂತರು ನಾಪತ್ತೆಯಾಗುತ್ತಿದ್ದಾರೆ. ಫೋಬ್ಸ್ ನಿಯತಕಾಲಿಕದ ಪ್ರಕಾರ ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಮಂದಿ ಶ್ರೀಮಂತರು ನಾಪತ್ತೆಯಾಗಿದ್ದಾರೆ.

2020ರಲ್ಲಿ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ ಅವರು, ಮೂರು ತಿಂಗಳ ಕಾಲ ನಾಪತ್ತೆಯಾಗಿದ್ದರು. ನಂತರ ಅವರು ತಮ್ಮ ಇರವಿನ ಬಗ್ಗೆ ಹೇಳಿಕೊಂಡಿದ್ದರೂ, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ