ರಾಯಚೂರಿನಲ್ಲಿ ಸ್ಕಾರ್ಪಿಯೋ ವಾಹನ ಡಿಕ್ಕಿ, ಬೈಕ್‌ ನಲ್ಲಿದ್ದ ಆರ್ ಟಿಓ ಸಿಬ್ಬಂದಿ ದುರ್ಮರಣ

ರಾಯಚೂರಿನಲ್ಲಿ ಸ್ಕಾರ್ಪಿಯೋ ವಾಹನ ಡಿಕ್ಕಿ, ಬೈಕ್‌ ನಲ್ಲಿದ್ದ ಆರ್ ಟಿಓ ಸಿಬ್ಬಂದಿ ದುರ್ಮರಣ

ರಾಯಚೂರು: ಸ್ಕಾರ್ಪಿಯೋ ವಾಹನ ,ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರ್ ಟಿಓ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಆರ್ ಟಿ ಓ ಸರ್ಕಲ್‌ ಸಮೀಪ ನಡೆದಿದೆ.

34 ವರ್ಷದ ಚಂದ್ರಕಾಂತ್‌ ಮೃತ ದುರ್ದೈವಿ. ಈತ ಆರ್‌ ಟಿ ಓ ಕಂಪ್ಯೂಟರ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು.ಈ ಅಫಘಾತದಿಂದ ಬೈಕ್‌ ನ ಹಿಂಬದಿ ಸವಾರ ನಿಲೇಶ್‌ ಗೆ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಕಾರ್ಪಿಯೋ ವಾಹನ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ರಾಯಚೂರು ನಗರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.