ರಾತ್ರಿ 10 ಗಂಟೆ ನಂತರ ಭಾಷಣ ಮಾಡದೇ ಸಾರ್ಜಜನಿಕರ ಕ್ಷಮೆಯಾಚಿಸಿದ ಪ್ರಧಾನಿ!

ರಾಜಸ್ಥಾನ್ ನ ಸಿರೊಹಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರ್ಯಾಲಿಗೆ ಪ್ರಧಾನಿ ನರೇಂದ್ರ ಮೋದಿ ತಡವಾಗಿ ಆಗಮಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಲೌಡ್ ಸ್ಪೀಕರ್ ಬಳಸದೇ ನೇರವಾಗಿ ಸಂಕ್ಷಿಪ್ತ ಭಾಷಣ ಮಾಡಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾನು ಬರುವುದು ತಡವಾಗಿದೆ. ಆದರೆ ಕಾಕತಾಳೀಯ ಅಂದರೆ 10 ಗಂಟೆ ಆಗಿದೆ. ನಾನು ನಿಯಮಗಳನ್ನು ಪಾಲಿಸುವುದರಿಂದ ಲೌಡ್ ಸ್ಪೀಕರ್ ನಲ್ಲಿ ಭಾಷಣ ಮಾಡಲಾರೆ. ಆದರೆ ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡುವೆ ಎಂದು ಅವರು ಹೇಳಿದರು.