ರಾಜಕಾರಣಿಗಳಿಂದ ಫ್ರೀ ಆಗಿ 'ಕುಕ್ಕರ್' ಪಡೆದವರೇ ಹುಷಾರ್ ..! ಈ ಸುದ್ದಿ ಓದಿ
ಚಿಕ್ಕಮಗಳೂರು : ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡರು ನೀಡಿದ್ದಾರೆ ಎನ್ನಲಾದ ಕುಕ್ಕರ್ ಸ್ಪೋಟಗೊಳ್ಳುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜನರಿಗೆ ಉಚಿತವಾಗಿ ಕಳಪೆ ಮಟ್ಟದ ಕುಕ್ಕರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಶಾಸಕ ರಾಜೇಗೌಡ ಹಂಚಿದ್ದಾರೆ ಎನ್ನಲಾದ ಕುಕ್ಕರ್ ಒಂದು ಬ್ಲಾಸ್ಟ್ ಆದ ಘಟನೆ ಶಾನುವಳ್ಳಿಯಲ್ಲಿ ನಡೆದಿದೆ. ದೇವರಾಜ್ ಎಂಬುವವರ ಮನೆಯಲ್ಲಿ ಕುಕ್ಕರ್ ಪಡೆದ ಮೂರೇ ದಿನದಲ್ಲಿ ಕುಕ್ಕರ್ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿದೆ. ಕಳೆದ 15 ದಿನದಲ್ಲಿ ಇಂತಹ 2 ಘಟನೆ ನಡೆದಿದೆ ಎನ್ನಲಾಗಿದೆ. ರಾಜಕಾರಣಿಗಳು ಉಚಿತವಾಗಿ ಕೊಡುತ್ತಾರೆ ಎಂದು ಕುಕ್ಕರ್ ಪಡೆಯುವ ಮುನ್ನ ಹುಷಾರ್..ಇಲ್ಲದಿದ್ದರೆ ನಿಮ್ಜ ಪ್ರಾಣಕ್ಕೆ ಸಂಚಕಾರ ಬರಬಹುದು.
ಬಿಜೆಪಿ ನಾಯಕ ಮುನಿರಾಜು ಮನೆಯ ಮೇಲೆ GST, ಪ್ಲೈಯಿಂಗ್ ಸ್ಕ್ವಾಡ್ ದಾಳಿ: ಸೀರೆ, ಫಾರಂಗಳು ಜಪ್ತಿ
ಬೆಂಗಳೂರು: ಬಿಜೆಪಿ ಮುಖಂಡ ಮುನಿರಾಜು ಅವರ ನಿವಾಸದ ಮೇಲೆ ಇಂದು ದಿಢೀರ್ ಜಿಎಸ್ಟಿ ಅಧಿಕಾರಿಗಳು, ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದಾರೆ. ಈ ವೇಳೆ ವೋಟರ್ ಐಡಿಗೆ ಸಂಬಂಧಿಸಿದಂತ ಫಾರ್ಮ್, ಸೀರೆಗಳನ್ನು ಜಪ್ತಿ ಮಾಡಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಅಗ್ರಹಾರ ಬಡಾವಣೆಯಲ್ಲಿ ಇರುವಂತ ಬಿಜೆಪಿ ಮುಖಂಡ ಮುನಿರಾಜು ಮನೆ, ಮಳಿಗೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳ ಮಾಹಿತಿ ಆಧರಿಸಿ ತಪಾಸಣೆ ಮಾಡುತ್ತಿದ್ದಾರೆ.
ದಾಳಿಯ ವೇಳೆಯಲ್ಲಿ ಸೀರೆ, ಚುನಾವಣೆಗೆ ಸಂಬಂಧಿಸಿದಂತ ಫಾರಂಗಳು ಸಿಕ್ಕಿವೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ನವೆಂಬರ್ ನಲ್ಲಿ ತಂದಿದ್ದ ಸೀರೆಗಳನ್ನು ಈವರೆಗೂ ಮಾರಾಟ ಮಾಡದೇ ಇಟ್ಟುಕೊಂಡಿರೋದನ್ನು ಜಿಎಸ್ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜಿಎಸ್ಟಿ, ಪ್ಲೈಯಿಂಗ್ ಸ್ಕ್ವಾಡ್ ಪರಿಶೀಲನೆಯನ್ನು ಪೊಲೀಸರ ಭದ್ರತೆಯಲ್ಲಿ ಮುಂದುವರೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಬ್ಯಾಟರಾಯನಪುರ ಕ್ಷೇತ್ರದ ನೋಡಲ್ ಅಧಿಕಾರಿ ಸತೀಶ್ ಅವರು, ಮಾಹಿತಿ ಆಧರಿಸಿ ಈ ದಾಳಿಯನ್ನು ನಡೆಸಲಾಗಿದೆ. ದಾಳಿಯ ವೇಳೆಯಲ್ಲಿ ಸೀರೆ, ವೋಟರ್ ಐಡಿಗೆ ಸಂಬಂಧಿಸಿದಂತ ಫಾರಂ ಸಿಕ್ಕಿದ್ದು, ಅವುಗಳನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದ್ದಾರೆ.ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯಿಸಿರುವಂತ ಬಿಜೆಪಿ ಮುಖಂಡ ಮುನಿರಾಜು ಅವರು, ನಾವು ವೋಟರ್ ಐಡಿ ಇಲ್ಲದವರಿಗೆ ಐಡಿ ಮಾಡಲು ಸಹಾಯ ಮಾಡುತ್ತೇವೆ. ನಾವೇ ಫಾರಂ ನಂ.6 ಭರ್ತಿ ಮಾಡಿ, ಪೋಟೋ ಅಂಟಿಸಿಕೊಡುತ್ತಿದ್ದೇವೆ. ನಾನು ಕಾನೂನು ಬಾಹಿರವಾಗಿ ಕೃತ್ಯವೆಸಗಿಲ್ಲ. ನಾವು ಅಪ್ ಲೋಡ್ ಮಾಡಿದ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದರು.ನಾವು ಅಕ್ರಮ ಎಸಗಿದ್ದರೇ ಚುನಾವಣಾ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳಲಿ. ಮಳಿಗೆಯಲ್ಲಿ ಇರುವ ಸೀರೆಗಳಿಗೆ ಬಿಲ್ ಕೂಡ ಇದೆ. ಜಿಎಸ್ಟಿ ಕಟ್ಟಿದ್ದೇವೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಗುರುವಾರದೊಳಗೆ ಜೆಡಿಎಸ್ 2ನೇ ಪಟ್ಟಿ ಪ್ರಕಟ: ಹಾಸನ ಅಭ್ಯರ್ಥಿಯ ಹೆಸರು ಇರುತ್ತದೆ - ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗಳ ( JDS Candidate List ) ಎರಡನೇ ಪಟ್ಟಿಯನ್ನು ನಾಳೆ ಅಥವಾ ಗುರುವಾರ ಪಟ್ಟಿ ಬಿಡುಗಡೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ತಿಳಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಇಂದು ಮಂಗಳವಾರ ಆಗಿರುವುದರಿಂದ ಪಟ್ಟಿ ಬಿಡುಗಡೆ ಆಗಿಲ್ಲ. ದೇವೆಗೌಡರು ನಾಳೆ ಸಂಜೆ ದೆಹಲಿಯಿಂದ ವಾಪಸ್ ಆಗುತ್ತಾರೆ. ನಂತರ ಪಟ್ಟಿ ಹೊರಬರಲಿದೆ ಎಂದರು.
ನನಗಿಂತ ನಿಮಗೆ ಹಾಸನ ಟಿಕೆಟ್ ಘೋಷಣೆ ಬಗ್ಗೆ ಕುತೂಹಲವಿದೆ ಎಂದು ಮಾಧ್ಯಮಗಳಿಗೆ ಹೇಳಿದ ಅವರು, ಹಾಸನವನ್ನು ಸೇರಿಸಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅದನ್ನು ಬಿಟ್ಟು ಮಾಡಿದರೆ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಆ ಪಟ್ಟಿಯಲ್ಲಿ ಹಾಸನದ್ದು ಒಳಗೊಂಡಂತೆ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.ಮೊದಲ ಪಟ್ಟಿ ಬಿಡುಗಡೆಯಾದಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ. ಇದರಿದ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ 2-3 % ಮತ ಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟೋದಕ್ಕೆ ನಾವು ಯಾವುದೇ ದುಡುಕಿನ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.ಕಾಂಗ್ರೆಸ್ ಪಟ್ಟಿ ರಿಲೀಸ್ ಆಗದ ಹಿನ್ನೆಲೆ ಜೆಡಿಎಸ್ ಪಟ್ಟಿ ವಿಳಂಬ ಆಗುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಚಿಂತೆ ಮಾಡಿಲ್ಲ. ನಾವು ನಮ್ಮದೇ ರೀತಿಯಲ್ಲಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತೇವೆ ಎಂದರು.