ಯುವಕರ ಡೆಡ್ಲಿ ವ್ಹೀಲಿಂಗ್: ರಸ್ತೆಯಲ್ಲಿ ಯುವಕರ ಹುಚ್ಚಾಟ ನೋಡಿದ್ರೆ ಎದೆ ಝಲ್ ಅನ್ನುತ್ತೆ

ಬೆಂಗಳೂರು: ಇನ್‌ಸ್ಟಾ ಗ್ರಾಂನಲ್ಲಿ ವೀವ್ಸ್ ಹಾಗೂ ಫಾಲೋವರ್ಸ್ ಪಡೆಯುವುದಕ್ಕಾಗಿ ಯುವಕರು ರಸ್ತೆಯಲ್ಲಿ ವೀಲಿಂಗ್ ಮಾಡಿ ಚಿತ್ರೀಕರಣ ಮಾಡುವುದು ಇತ್ತೀಚೆಗೆ ಹೆಚ್ಚಳವಾಗಿದೆ. ಅದರಂತೆ ಈ ರೀತಿ ಮಾಡುವ ಯುವಕರ ಮೇಲೆ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳೆದ್ದಿವೆ.
ಈತನ ಇನ್‌ಸ್ಟಾ ಖಾತೆಯ ತುಂಬೆಲ್ಲ ವೀಲಿಂಗ್ ವಿಡಿಯೊಗಳೇ ತುಂಬಿವೆ. ವೀಲಿಂಗ್ ಕ್ರೇಜ್‌ಗಾಗಿ ಆತನ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ೨೨,೦೦೦ ಜನ ಫಾಲೋವರ್ಸ್ ಇದ್ದಾರೆ. ಅವನು ಹೆಲ್ಮೆಟ್ ಧರಿಸುವುದಿಲ್ಲ, ಬೈಕ್‌ಗೆ ನಂಬರ್ ಫ್ಲೇಟ್ ಕೂಡ ಇಲ್ಲದೆ ಚಾಲನೆ ಮಾಡುತ್ತಾನೆ. ಈತನನ್ನು ನೋಡಿ ಸಾಕಷ್ಟು ಮಂದಿ ವೀಲಿಂಗ್‌ನಲ್ಲೂ ಫಾಲೋ ಮಾಡುವ ಅಪಾಯವಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದೀವಿ ಎಂದು ಸಂಚಾರಿ ಪೊಲೀಸರು ಹೇಳುತ್ತಾರಾದರೂ ಈ ರೀತಿಯ ಚಟುವಟಿಕೆಗಳನ್ನು ಯಾಕೆ ನಿಯಂತ್ರಿಸುತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ..