ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​

ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​

ವದೆಹಲಿ: ಸಂಬಂಧದಲ್ಲಿ ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ವಂಚನೆ ಮಾಡುತ್ತಾರೆ? ಇದು ಆಗಾಗ ಕೇಳಲ್ಪಡುವ ಸಾಮಾನ್ಯ ಪ್ರಶ್ನೆಯಾಗಿದೆ. ಕೆಲವು ಡೇಟಾಗಳ ಪ್ರಕಾರ ಮಹಿಳೆಗಿಂತ ಪುರುಷರೇ ಹೆಚ್ಚು ಮೋಸ ಮಾಡುತ್ತಾರಂತೆ. ಆದರೆ, ಇನ್ನು ಕೆಲವರು ಮಹಿಳೆಯರೇ ಹೆಚ್ಚು ವಂಚನೆ ಮಾಡುತ್ತಾರೆ ಅಂತ ನಂಬಿದ್ದಾರೆ

ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ಇದು ಬಹಳ ಚರ್ಚಿತ ವಿಷಯವಾಗಿದೆ. ಯೂಟ್ಯೂಬ್​ ಶಾರ್ಟ್ಸ್​ ಮತ್ತು ಇನ್​ಸ್ಟಾಗ್ರಾಂ ರೀಲ್​ಗಳಲ್ಲೂ ಯಾರು ಮೇಲು ಎಂಬ ವಿಚಾರಕ್ಕೆ ನಡೆಯುವ ಕಿತ್ತಾಟವನ್ನು ನೋಡಬಹುದು. ಇದೀಗ ಈ ಮಿಲಿಯನ್​ ಡಾಲರ್​ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪಾಕಿಸ್ತಾನಿ ಯುವತಿಯೊಬ್ಬಳು ಪಾಕ್​ ಬೀದಿಗೆ ಇಳಿದಿದ್ದು, ಆಕೆಗೆ ಕೆಲವು ಹಾಸ್ಯಾತ್ಮಕ ಉತ್ತರಗಳು ಸಿಕ್ಕಿವೆ.

@the_royal_sisodiya ಹೆಸರಿನ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಅಪ್​ಲೋಡ್​ ಆಗಿದ್ದು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈಗಾಗಲೇ 20 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಪುರುಷ ಅಥವಾ ಮಹಿಳೆ ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡುತ್ತಾರೆ ಹೇಳಿ ಎಂದು ಯುವತಿ, ಯುವಕನಿಗೆ ಪ್ರಶ್ನೆ ಕೇಳುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಈ ಪ್ರಶ್ನೆಗೆ ಸ್ವಲ್ಪವೂ ಯೋಚಿಸಿದೆ ಮಹಿಳೆಯರು ಎಂದು ಯುವಕ ಹೇಳುತ್ತಾನೆ. ಇದಕ್ಕೆ ಯುವತಿ ಅದು ಹೇಗೆ ಎಂದು ಮರು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಉತ್ತರಿಸುವ ಯುವಕ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಪ್ರಪಂಚದ ಬಗ್ಗೆ ಹೇಳುತ್ತೇನೆ. ನಿಮ್ಮ ಬಳಿ ಐಫೋನ್, ರೋಲೆಕ್ಸ್ ಮತ್ತು ಕಾರು ಇದ್ದರೆ ಯಾವ ಹುಡುಗಿಯೂ ವಿಶ್ವಾಸದ್ರೋಹಿ ಆಗುವುದಿಲ್ಲ. ಒಂದು ವೇಳೆ ಅವ್ಯಾವು ನಿಮ್ಮ ಬಳಿ ಇಲ್ಲದಿದ್ದರೆ ಪ್ರತಿ ಹುಡುಗಿಯೂ ಸಹ ವಿಶ್ವಾಸದ್ರೋಹಿ ಎಂದು ಹೇಳುತ್ತಾರೆ.

ಯಾಕೆ ಹೀಗೆ ಎಂದು ಯುವತಿ ಮತ್ತೆ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಉತ್ತರ ನೀಡುವ ಯುವಕ, ಈಗಿನ ಟ್ರೆಂಡ್​ ಇರುವುದೇ ಹಾಗೆ. ಸೈಕಲ್​ ಬಾಯ್​ ಪ್ರೇಯಸಿಯನ್ನು ಸ್ಕೂಟರ್​ನಲ್ಲಿ ಬಂದವನು ಮರಳು ಮಾಡಿಕೊಂಡು ಹೊಗುತ್ತಾನೆ ಮತ್ತು ಸ್ಕೂಟರ್​ ಬಾಯ್​ ಪ್ರೇಯಸಿಯನ್ನು ಕಾರು ಮಾಲೀಕ ಪಟಾಯಿಸಿಕೊಳ್ಳುತ್ತಾನೆ ಎಂದು ಯುವಕ ಉತ್ತರಿಸಿದನು.

ಈ ಉತ್ತರ ಕೇಳುತ್ತಿದ್ದಂತೆ ಯುವತಿ ಸೇರಿದಂತೆ ಸುತ್ತಲೂ ಇದ್ದ ಜನರು ಗಹಗಹಿಸಿ ನಗುತ್ತಾರೆ. ನಗುತ್ತಲೇ ಯುವತಿ ನಿಮ್ಮ ಬಳಿ ಏನಿದೆ ಎಂದು ಕೇಳುತ್ತಾಳೆ. ಅದಕ್ಕೆ ಉತ್ತರ ನೀಡುವ ಯುವಕ ನನ್ನ ಬಳಿ ಹೋಂಡಾ ವಾಹನವಿದೆ ಮತ್ತು ನಾನು ಯಾರನ್ನೂ ಲವ್​ ಮಾಡುತ್ತಿಲ್ಲ ಎನ್ನುತ್ತಾನೆ.

ಇದೀಗ ಪಾಕ್ ಯುವಕ​ ಉತ್ತರ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್​)