ಪ್ರೀತಿಯ ನಾಟಕವಾಡಿ ಕೈಕೊಟ್ಟ ಯುವಕ; ಕಗ್ಗಲಿಪುರ ಗ್ರಾ.ಪಂ ಅಧ್ಯಕ್ಷ, ಪುತ್ರನ ವಿರುದ್ಧ ಎಫ್ಐಆರ್
ಬೆಂಗಳೂರು: ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ಮೋಸ ಮಾಡಿದ್ದನು ಪ್ರಶ್ನಿಸಲು ಹೋಗಿದ್ದ ತಂದೆ, ಚಿಕ್ಕಪ್ಪನ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಆತನ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆಗೆ ಒಳಗಾದ ಯುವತಿ ತಂದೆ ಅಬ್ದುಲ್ ಮರ್ದನ್, ಕಗ್ಗಲಿಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮಮ್ತಾಜ್ ಅವರ ಪುತ್ರಿ ಕಾಲೇಜಿಗೆ ಹೋಗುತ್ತಿದ್ದಾಗ ಆರೋಪಿ ಶೋಯೇಬ್ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿದ್ದ. ಈ ವಿಚಾರ ತಿಳಿದ ಯುವತಿ ಪಾಲಕರು, ಪರ್ವೆಜ್ ಬಳಿ ಹೋಗಿ ಕೇಳಿದಾಗ ನಿಮ್ಮ ಪುತ್ರಿಯ ವ್ಯಾಸಂಗ ಮುಗಿಯಲಿ. ನಮ್ಮ ಹುಡುಗನಿಗೆ ಬುದ್ದಿವಾದ ಹೇಳಿ 2 ವರ್ಷಗಳ ಬಳಿಕ ಮದುವೆ ಮಾಡುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದರು. ಇದನ್ನೇ ನಂಬಿದ್ದ ಪಾಲಕರು, ಯುವತಿ ಓದು ಮುಗಿಯುವರೆಗೂ ಸುಮ್ಮನಾಗಿದ್ದರು.
ಓದು ಮುಗಿದ ಮೇಲೆ ಯುವತಿ ಪಾಲಕರು, ಯುವಕನ ತಂದೆ ರ್ವೆಜ್ ಬಳಿಗೆ ಹೋಗಿ ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಾರೆ. ಅದಕ್ಕೆ ರ್ವೆಜ್, ಏನು ಬೇಕಾದರು ಮಾಡಿ ನನ್ನ ಮಗನಿಗೆ ನಿಮ್ಮ ಯುವತಿಯನ್ನು ಮದುವೆ ಮಾಡಿಕೊಳ್ಳುವುದಿಲ್ಲ. ನಾನು ರಾಜಕೀಯ ಪ್ರಭಾವ ಇದೆ ಎಂದು ಹೆದರಿಸಿ ಕಳುಹಿಸಿದ್ದ. ನೊಂದ ಯುವತಿ ಪಾಲಕರು, ಮಸೀದಿ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದರು.
ಮಸೀದಿ ಮುಖ್ಯಸ್ಥರು ಪರ್ವೆಜ್‌ನನ್ನು ಕರೆದು ಕೇಳಿದಾಗ 2 ತಿಂಗಳು ಕಾಲವಕಾಶ ನೀಡುವಂತೆ ಕೇಳಿದ್ದರು. ಅವದಿ ಮುಗಿದ ಮೇಲೂ ರ್ವೆಜ್ ಕುಟುಂಬ ಯಾವುದೇ ಉತ್ತರ ಕೊಟ್ಟಿರಲಿಲ್ಲ. ಫೆ.20ರ ಸಂಜೆ 7 ಗಂಟೆಗೆ ಯುವತಿಯ ತಂದೆ ಮತ್ತು ಚಿಕ್ಕಪ್ಪ ಮದುವೆ ವಿಷಯ ಕೇಳುವ ಉದ್ದೇಶಕ್ಕೆ ರ್ವೆಜ್ ಮನೆಗೆ ಹೋಗಿದ್ದಾರೆ. ಒಳಗೆ ಕರೆದು ರ್ವೆಜ್ ಮತ್ತು ಆತನ ಪುತ್ರ ಸೇರಿದಂತೆ ಕುಟುಂಬ ಸದಸ್ಯರು ಅಬ್ದುಲ್ ಮತ್ತು ಮಮ್ತಾಜ್‌ಗೆ ಹಲ್ಲೆ ನಡೆಸಿದ್ದಾರೆ. ಮತ್ತೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿ ಕಳುಹಿಸಿದ್ದಾರೆ. ನೊಂದ ಯುವತಿ ತಂದೆ, ಠಾಣೆಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.