ಮೈಸೂರಿನಲ್ಲಿ ಕೇಕ್ ಮಿಕ್ಸಿಂಗ್ ನಲ್ಲಿ ಭಾಗಿಯಾದ ನಟ ಪ್ರಭುದೇವ್
ಕ್ರಿಸ್‌ಮಸ್ ಹಬ್ಬಕ್ಕೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಎಲ್ಲೆಡೆ ಕ್ರಿಸ್ ಮಸ್ ಹಬ್ಬಕ್ಕೆ ಭರ್ಜರಿ ಸಿದ್ದತೆ ಶುರುವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗ್ತಿದ್ದು, ಪ್ರತಿಷ್ಠಿತ ಹೋಟೆಲ್ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಕೇಕ್ ತಯಾರಿಕೆಗೆ ಚಾಲನೆ ನೀಡಲಾಗಿದೆ.
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಪ್ರತಿವರ್ಷದಂತೆ ಈ ವರ್ಷವೂ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಸಮಾರಂಭ ಹಮ್ಮಿಕೊಂಡಿದೆ. ಈ ವರ್ಷದ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ನಟ ಪ್ರಭುದೇವ್ ಭಾಗಿಯಾಗಿದ್ದರು. ವಿವಿಧ ಬಗೆಯ ಡ್ರೈ ಫ್ರುಟ್ಸ್‌ಗಳನ್ನು ಮಾತ್ರ ಮಿಕ್ಸ್ ಮಾಡಿದ ನಟ ಪ್ರಭುದೇವ ಎಲ್ಲರ ಗಮನಸೆಳೆದರು. ಆಲ್ಕೋಹಾಲ್ ಮಿಶ್ರಿತ ವೈನ್ ಮಿಕ್ಸಿಂಗ್ ಗಳಿಂದ ಪ್ರಭುದೇವ್ ದೂರ ಉಳಿದು ಎಲ್ಲರ ಗಮನ ಸೆಳೆದರು.
ಆಲ್ಕೋಹಾಲ್ ಮಿಶ್ರಿತ ಮದ್ಯದ ಬಾಟಲಿಗಳನ್ನು ಮುಟ್ಟದೇ ಸುಮ್ಮನೇ ನೋಡುತ್ತಾ ನಿಂತ ನಟ ಪ್ರಭುದೇವ ಕೇಕ್ ಮಿಕ್ಸಿಂಗ್ ನೋಡಿ ಖುಷಿಪಟ್ಟರು .ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಹಾಗು ವಿಧಾನ ಪರಿಷತ್ ನ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಹಾಗು ಅವರ ಪುತ್ರ ಸೇರಿದಂತೆ ಕುಟುಂಬ ಸದಸ್ಯರು, ಹೋಟೆಲ್‌ನ ಸಿಬ್ಬಂದಿಗಳು ಕ್ರಿಸ್‌ಮಸ್ ಕೇಕ್ ಮಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು.