ಮೂರು ಸರ್ಜರಿಯಾದ್ರೂ ಕಡಿಮೆಯಾಗದ ನೋವು: ಗಂಡ ಮರಳಿ ಬರುವಷ್ಟರಲ್ಲಿ ಮರೆಯಾದ ಮಹಿಳೆ
ವಿಜಯವಾಡ: ಎಷ್ಟು ಬಾರಿ ಚಿಕಿತ್ಸೆ ಒಳಗಾದರೂ ಆರೋಗ್ಯ ಸಮಸ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ ಅಂತಾ ವಿವಾಹಿತ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅನುಷಾ ಎಂದು ಗುರುತಿಸಲಾಗಿದೆ.
ಶಿವ ರೆಡ್ಡಿ ಶನಿವಾರ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಅನುಷಾ ಕರೆ ಮಾಡಿ ತಕ್ಷಣ ಮನೆಗೆ ಬರುವಂತೆ ಹೇಳಿದ್ದಳು. ಆದರೆ, ಶಿವ ರೆಡ್ಡಿ ಕೈಯಲ್ಲಿ ಸಾಧ್ಯವಾಗಿರಲಿಲ್ಲ. ಕೆಲಸ ಮುಗಿಸಿಕೊಂಡು ಭಾನುವಾರ ಬೆಳಗ್ಗೆ ಮನೆಗೆ ಬಂದು ಶಿವ ರೆಡ್ಡಿ ಬಾಗಿಲು ಬಡಿದಿದ್ದಾನೆ. ಎಷ್ಟೊತ್ತಾದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಶಿವ ರೆಡ್ಡಿ ಮನೆಯೊಳಗೆ ಕಿಟಕಿಯಲ್ಲಿ ಇಣುಕಿ ನೋಡಿದಾಗ ಅನುಷಾ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಅನುಷಾ ಸ್ಥಿತಿ ನೋಡಿ ಹೆದರಿದ ಶಿವ ರೆಡ್ಡಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಶಿವ ರೆಡ್ಡಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಈಗಾಗಲೇ ಮೂರು ಬಾರಿ ಸರ್ಜರಿಗೆ ಒಳಗಾಗಿದ್ದ ಅನುಷಾ, ನೋವನ್ನು ತಡೆಯಲಾರದೇ ಸಾವಿಗೆ ಶರಣಾಗಿದ್ದಾಳೆ ಎಂದು ಗಂಡ ತಿಳಿಸಿದ್ದಾನೆ.
ಮೃತದೇಹವನ್ನು ಪ್ರಕಾಶಂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.