ಮಾಜಿ ಸಿಎಂ ಬಿ ಎಸ್ ವೈ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಮಾಜಿ ಸಿಎಂ ಬಿ ಎಸ್ ವೈ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಮಾಜಿ ಸಿಎಂ ಬಿ ಎಸ್ ವೈ ಮೊಮ್ಮಗಳು ಆತ್ಮಹತ್ಯೆಗೆ ಶರಣು...?

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ(30) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಂಗಳೂರಿನ ಹೈಗ್ರೌಂಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದ ಸೌಂದರ್ಯ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸ್ತಾಯಿದ್ರು.ಆದ್ರೆ ತಾವೇ ಒಬ್ಬ ಉತ್ತಮ ವೈದ್ಯರಾಗಿದ್ದು  ಇಂದು ಬೆಳಿಗ್ಗೆ ನೇಣಿಗೆ ಶರಣಾದ್ರು ಅನ್ನುವ ಪ್ರಕರಣ ಬೆಳಕಿಗೆ ಬಂದಿದ್ದೂ ನಿಜಕ್ಕೂ ಕುಟುಂಬಸ್ಥರನ್ನು ವಿಚಲಿತರನ್ನಾಗಿಸಿದೆ. ಬೆಳಿಗ್ಗೆ 10ಗಂಟೆಗೆ ಪತಿ ಡಾ.ನೀರಜ್'ಗೆ ಕರೆ ಮಾಡಿದ್ದ ಸೌಂದರ್ಯ ಕೆಲಸದವರು ಬಂದು ಬಾಗಿಲು ತಟ್ಟಿದಾಗಲೂ ಬಾಗಿಲು ತೆರೆಯದ್ದನ್ನ ನೋಡಿ ಕೆಸದವರು ಸೌಂದರ್ಯ ಪತಿ ಡಾ.ನೀರಜ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.ಕೂಡಲೇ ಸ್ಥಳಕ್ಕೆ ಧಾವಿಸಿದ ಡಾ.ನೀರಜ್ ಅಪಾರ್ಟ್‌ಮೆಂಟ್ 'ಗೆ ಧಾವಿಸಿ ತಮ್ಮ ಬಳಿಯಿದ್ದ ಕೀ ಬಳಸಿ ಬಾಗಿಲು ತೆರೆದು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವಿಷಾದ ಅಂದ್ರೆ ಒಂದು ಕೋಣೆಯೊಳಗೆ ಒಂಭತ್ತು ತಿಂಗಳ ಮಗುವನ್ನು ಮಲಗಿಸಿ ಮತ್ತೊಂದು ಕೋಣೆಯಲ್ಲಿ ನೇಣಿಗೆ ಶರಣಾಗಿದ್ದೂ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಶೀಫ್ಟ್ ಮಾಡಲಾಗಿದ್ದು ಮೇಲ್ನೋಟಕ್ಕೆ ಮಗು ಜನಿಸಿದ ಬಳಿಕ ಸೌಂದರ್ಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು,ಸಧ್ಯ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಮೊಹಜರು ಕೂಡಾ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆ ಸಂಪೂರ್ಣವಾಗಿ ಮುಗಿದಿದ್ದು ಬಳಿಕ  ಪತಿಯ ಊರು ಅಬ್ಬಿಗೇರೆಯಲ್ಲಿ ರುದ್ರಮುನಿ ಶ್ರೀಗಳ ಸಮ್ಮುಖದಲ್ಲಿ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗತ್ತೆ.ಇನ್ನು ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ,ಬಿ ವೈ ರಾಘವೇಂದ್ರ  ಸೇರಿದಂತೆ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.