ಮಲಯಾಳಂ ಚಿತ್ರರಂಗದ ಮೊದಲ ನಟಿ ಪಿ.ಕೆ.ರೋಸಿಗೆ ಡೂಡಲ್ ಗೌರವ ಸಲ್ಲಿಸಿದ ಗೂಗಲ್

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಪ್ರಥಮ ಮಹಿಳಾ ನಾಯಕಿ ಪಿ.ಕೆ.ರೋಸಿ ( (PK Rosy) ಅವರಿಗೆ ಅವರ 120ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಗೂಗಲ್ ಸರ್ಚ್ ಎಂಜಿನ್, ಡೂಡಲ್ ಗೌರವ ಸಲ್ಲಿಸಿದೆ. ಆಕೆಗಾಗಿ ಗೂಗಲ್ ಮೀಸಲಿರಿಸಿರುವ ಪುಟದಲ್ಲಿ ಆಕೆ ಕೇರಳದ ತಿರುವನಂತಪುರಂನಲ್ಲಿ ಫೆ.
ಗೂಗಲ್ ಪುಟದ ಪ್ರಕಾರ, ಪಿ.ಕೆ.ರೋಸಿ ಅವರ ನಿಜ ನಾಮಧೇಯ ರಾಜಮ್ಮ. ಕಲೆಯನ್ನು ಪ್ರದರ್ಶಿಸಲು, ವಿಶೇಷವಾಗಿ ಮಹಿಳೆಯರಿಗೆ ಸಮಾಜದ ಹಲವಾರು ವಲಯಗಳಲ್ಲಿ ನಿರುತ್ತೇಜನವಿದ್ದ ಕಾಲದಲ್ಲಿ ಅವರು ಆ ಅಡೆತಡೆಗಳನ್ನು ಮುರಿದು, ಮಲಯಾಳಂ ಚಿತ್ರ 'ವಿಗಾಥಕುಮಾರನ್'ನಲ್ಲಿ ಮಹಿಳಾ ನಾಯಕಿಯಾಗಿ ಅಭಿನಯಿಸಿದ್ದರು ಎಂದು ಹೇಳಲಾಗಿದೆ.
ತಿರುವನಂತಪುರಂನ ಕ್ಯಾಪಿಟಾಲ್ ಚಿತ್ರಮಂದಿರದಲ್ಲಿ ಆ ಚಿತ್ರವನ್ನು ಪ್ರದರ್ಶಿಸಿದಾಗ, ಓರ್ವ ದಲಿತ ಮಹಿಳೆಯು ನಾಯರ್ ಮಹಿಳೆಯ ಪಾತ್ರ ನಿರ್ವಹಿಸಿರುವುದನ್ನು ಕಂಡು ಪ್ರೇಕ್ಷಕರು ಆಕ್ರೋಶಗೊಂಡಿದ್ದರು ಎಂದು ಅಂತರ್ಜಾಲ ಚಲನಚಿತ್ರ ದತ್ತಾಂಶವು ಹೇಳುತ್ತದೆ.
ರೋಸಿಯವರು ಓರ್ವ ಟ್ರಕ್ ಡ್ರೈವರ್ ಆದ ಕೇಸವ ಪಿಳ್ಳೈರನ್ನು ವಿವಾಹವಾಗಿ ತಮಿಳುನಾಡಿಗೆ ಸ್ಥಳಾಂತರಗೊಂಡು, ಅಲ್ಲಿ 'ರಾಜಮ್ಮಾಳ್' ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು.
ರೋಸಿಯವರು ನಟಿಸುವುದನ್ನು ನಿಲ್ಲಿಸಿದ ಹಲವಾರು ವರ್ಷಗಳ ನಂತರ ಅವರು ಮಲಯಾಳಂ ಚಲನಚಿತ್ರ ಹಾಗೂ ಸಮಾಜಕ್ಕೆ ನೀಡಿದ್ದ ಕೊಡುಗೆಯು ಸಂಪೂರ್ಣವಾಗಿ ಬೆಳಕಿಗೆ ಬಂದಿತ್ತು. ಈ ಕುರಿತು ಟಿಪ್ಪಣಿ ದಾಖಲಿಸಿರುವ ಗೂಗಲ್, "ನಿಮ್ಮ ಧೈರ್ಯ ಮತ್ತು ನೀವು ಬಿಟ್ಟು ಹೋಗಿರುವ ಪರಂಪರೆಗೆ ಧನ್ಯವಾದಗಳು ಪಿ.ಕೆ.ರೋಸಿ" ಎಂದು ಶ್ಲಾಘಿಸಿದೆ.