'ಪ್ರಧಾನಿ ಮೋದಿ' ಭೇಟಿಗೂ ಮುನ್ನ ರಾಜಸ್ಥಾನದಲ್ಲಿ ಭಾರೀ ಪ್ರಮಾಣದ 'ಸ್ಫೋಟಕ' ಪತ್ತೆ, ಒರ್ವ ಅರೆಸ್ಟ್

ನವದೆಹಲಿ: ಫೆಬ್ರವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನಿಗದಿತ ಭೇಟಿಗೆ ಮುಂಚಿತವಾಗಿ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ನಂತ್ರ ಒರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ.
ಪ್ರಧಾನ ಮಂತ್ರಿಯ ಭೇಟಿಗೆ ಮುಂಚಿತವಾಗಿ ಭದ್ರತಾ ಸಿದ್ಧತೆಗಳನ್ನ ಪರಿಶೀಲಿಸಿದ ದೌಸಾ ಪೊಲೀಸರು ಜಿಲ್ಲೆಯ ಖಾನ್ ಭಾಂಕರಿ ರಸ್ತೆಯ ಬಳಿ ಸ್ಫೋಟಕಗಳನ್ನ ಸಾಗಿಸುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಪೊಲೀಸರು 65 ಡಿಟೋನೇಟರ್ಗಳು ಸೇರಿದಂತೆ ಸುಮಾರು 1000 ಕೆಜಿ ಸ್ಫೋಟಕಗಳನ್ನ ಮತ್ತು ಸ್ಫೋಟಕ್ಕೆ ಬಳಸುವ 360 ಜಿಲೆಟಿನ್ ಕಡ್ಡಿಗಳನ್ನ ಹೊಂದಿರುವ 40 ಪೆಟ್ಟಿಗೆಗಳನ್ನ ವಶಪಡಿಸಿಕೊಂಡಿದ್ದಾರೆ. ಒಂದು ಜಿಲೆಟಿನ್ ಕಡ್ಡಿ ಸುಮಾರು 2.78 ಕೆಜಿ ತೂಕವಿದೆ.
ಬಂಧಿತ ವ್ಯಕ್ತಿಯನ್ನ ವ್ಯಾಸ್ ಮೊಹಲ್ಲಾ ನಿವಾಸಿ ರಾಜೇಶ್ ಮೀನಾ ಎಂದು ಗುರುತಿಸಲಾಗಿದ್ದು, ಸ್ಫೋಟಕಗಳನ್ನ ಸಾಗಿಸುತ್ತಿದ್ದ ವಾಹನವನ್ನ ಸಹ ವಶಪಡಿಸಿಕೊಳ್ಳಲಾಗಿದೆ.
ಪ್ರಧಾನಿಯವರ ನಿಗದಿತ ಭೇಟಿಯನ್ನ ಗಮನದಲ್ಲಿಟ್ಟುಕೊಂಡು ಪೊಲೀಸರಿಗೆ ಸ್ಪೋಟದ ಸುಳಿವು ಸಿಕ್ಕಿತ್ತು. ಅದರ ಆಧಾರದ ಮೇಲೆ ವಾಹನವನ್ನ ತಡೆಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.