ಮನುಷ್ಯನ ತಲೆಗೆ ಚಿಪ್ ಅಳವಡಿಕೆ ಮುಂದಾದ ಮಸ್ಕ್
ಎಲಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಸಂಸ್ಥೆ ಮಾನವ ಮೆದುಳಿನಲ್ಲಿ ಎಲೆಕ್ಟ್ರೋಡ್ ಚಿಪ್ ಅಳವಡಿಸುವ ಪ್ರಯೋಗಕ್ಕೆ ಸಜ್ಜಾಗಿದೆ. ಆದರೆ, ಮಸ್ಕ್ ಈಗಲೇ ಮೆದುಳಿನ ಚಿಪ್‌ನ 'ಸೂಪರ್ ಪವರ್ ಸ್ವಭಾವ'ದ ಯಾವ ರಹಸ್ಯವನ್ನೂ ಬಿಚ್ಚಿಡುತ್ತಿಲ್ಲ. ನಮ್ಮ ನ್ಯೂರಾಲಿಂಕ್ ಸಂಸ್ಥೆ ಮಾನವನ ಮೆದುಳಿಗೆ ಚಿಪ್ ಅಳವಡಿಸಲು ಯೋಜಿಸಿದೆ. ಇದರಿಂದಾಗಿ ಹುಟ್ಟಿನಿಂದ ಬರುವ ಅಂಧತ್ವ, ಮರೆವಿನ ರೋಗ ಶಮನಗೊಳಿಸಬಹುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.