ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಹೋದ ಪತ್ನಿ: ಪತಿಗೆ ಕಾದಿತ್ತು ಬಿಗ್​ ಶಾಕ್​!

ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಹೋದ ಪತ್ನಿ: ಪತಿಗೆ ಕಾದಿತ್ತು ಬಿಗ್​ ಶಾಕ್​!

ಅನಂತಪುರ: ಒಂದೇ ಕುಟುಂಬದ ನಾಲ್ವರು ದಿಢೀರ್ ನಾಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದೆ.

ಸಂಗಮೇಶ್​ ಮತ್ತು ಸೈಮೌನಿಕಾ ದಂಪತಿ ಅನಂತಪುರದ ಮಾರುತಿನಗರದ ನಿವಾಸಿಗಳು. ಇಬ್ಬರು 2011ರಲ್ಲಿ ಮದುವೆಯಾಗಿದ್ದಾರೆ.

ಲಿಖಿತ ಸರಣ್ಯ, ಲಿಖಿತ ಕಾರ್ತಿಕೇಯನ್​ ಮತ್ತು ಮನಿಕೃಷ್ಣ ಹೆಸರಿನ ಇಬ್ಬರು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ.

ಸಂಗಮೇಶ್​ ಅವರು ಕುಟುಂಬದ ನಿರ್ವಹಣೆಗಾಗಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸಂಗಮೇಶ್​ ಅವರಿಗೆ ಜೀವನದಲ್ಲಿ ಅತಿದೊಡ್ಡ ಆಘಾತವಾಗಿ ಪತ್ನಿ ಸೇರಿದಂತೆ ತನ್ನ ಮೂವರು ಮಕ್ಕಳು ಕೂಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.

ಸಂಗಮೇಶ್​ ಪತ್ನಿ ಮೌನಿಕಾ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಸೋಮವಾರ ಬೆಳಗ್ಗೆ ಮನೆ ಬಿಟ್ಟವರು ಮತ್ತೆ ಮನೆಗೆ ಮರಳಿ ಬಂದಿಲ್ಲ. ಮಕ್ಕಳು ಓದುವ ಶಾಲೆ ಮತ್ತು ಅಕ್ಕಪಕ್ಕದಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಗದೇ ಇದ್ದಾಗ ಕೊನೆಗೆ ಪೊಲೀಸ್​ ಠಾಣೆಗೆ ಸಂಗಮೇಶ್​ ದೂರು ನೀಡಿದ್ದಾರೆ.

ಸದ್ಯ ನಾಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಅನಂತಪುರ ಪೊಲೀಸ್​ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ಕತ್ತಿ ಶ್ರೀನಿವಾಸನ್​ ಮಾಹಿತಿ ನೀಡಿದ್ದಾರೆ.