ಮಂಡ್ಯದಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ : ನಿಟ್ಟುಸಿರು ಬಿಟ್ಟ ಜನರು

ಮಂಡ್ಯದಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ : ನಿಟ್ಟುಸಿರು ಬಿಟ್ಟ ಜನರು

ಮಂಡ್ಯ : ಮಂಡ್ಯದಲ್ಲಿ ಇಂದು ಮತ್ತೊಂದು ಚಿರತೆ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲಿನಲ್ಲಿ ಇಂದು ಬೋನಿಗೆ ಚಿರತೆ ಬಿದ್ದಿದೆ. ಡಿ.12 ಹಾಗೂ 27 ರಂದು ಎರಡು ಚಿರತೆಗಳನ್ನು ಸೆರೆಹಿಡಿಯಲಾಗಿತ್ತು, ಇದೀಗ ಮತ್ತೊಂದು ಚಿರತೆ ಸೆರೆಹಿಡಿಯಲಾಗಿದೆ.

ಪಾಂಡವಪುರ ತಾಲೂಕಿನ ರೈತ ಶಿವರಾಮ್ ತೋಟದಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಡುವ ಮೂಲಕ ಸೆರೆ ಹಿಡಿದಿದ್ದಾರೆ. ಗ್ರಾಮದ ಜನರ ಮನವಿ ಮೇರೆಗೆ ಬೋನ್ ಇಟ್ಟಿದ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.