ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಟ್ವೀಟ್ ಮಾಡಿದ್ದ ವ್ಯಕ್ತಿ ಅರೆಸ್ಟ್‌

ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಟ್ವೀಟ್ ಮಾಡಿದ್ದ ವ್ಯಕ್ತಿ ಅರೆಸ್ಟ್‌

ಬೆಂಗಳೂರು: ಏರ್‌ ಪೋರ್ಟ್‌ ನಲ್ಲಿ ಬಾಂಬ್‌ ಹಾಕುವುದಾಗಿ ಬೆದರಿಕೆ ಟ್ವೀಟ್ ಮಾಡಿದ ವ್ಯಕ್ತಿಯನ್ನ ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. 20 ವರ್ಷದ ವೈಭವ್ ಗಣೇಶ್ ಬಂಧಿತ. ಡಿ. 10ರಂದು ಆರೋಪಿ ತನ್ನ ಟ್ವಿಟರ್ ಖಾತೆಯಲ್ಲಿ ನಾನು ಬೆಂಗಳೂರು ಏರ್​ಪೋರ್ಟ್​ಗೆ ಬಾಂಬ್ ಹಾಕುತ್ತೇನೆ ಎಂದು ಇಂಗ್ಲಿಷ್​ನಲ್ಲಿ ಟ್ವೀಟ್ ಮಾಡಿದ್ದ. ಪ್ರಕರಣದ ಕುರಿತು ಸೈಬರ್ ಕ್ರೈಮ್ ಪೊಲೀಸರ ಸಹಯೋಗದೊಂದಿಗೆ ಸಿಟಿ ಪೊಲೀಸರು ತನಿಖೆ ಆರಂಭಿಸಿ ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.