ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ : ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಹತ್ಯೆಗೆ ಯತ್ನ

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ : ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಹತ್ಯೆಗೆ ಯತ್ನ

ಬೆಂಗಳೂರು : ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಡ್ರಗ್ ಪೆಡ್ಲರ್ ಗಳ ಬಗ್ಗೆ ಮಾಹಿತಿ ನೀಡಿದವನ ಮೇಲೆ ಲಾಂಗ್ ಬೀಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಡ್ರಗ್ಸ್ ಮಾರಾಟದ ಬಗ್ಗೆ ಪೊಲೀಸರಿಗೆ ವ್ಯಕ್ತಿಯೊಬ್ಬ ಮಾಹಿತಿ ನೀಡಿದ್ದು, ಆದ್ದರಿಂದ ಆತನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ.

ಮಾಹಿತಿದಾರ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಡ್ರಗ್ಸ್ ಜಪ್ತಿ ಮಾಡಿ ಆಯೂಬ್ ಹಾಗೂ ರೋಷನ್ ಅವರನ್ನು ಬಂಧಿಸಿದ್ದರು. ನಂತರ ಜಾಮೀನು ಮೇಲೆ ಹೊರಬಂದ ಆರೋಪಿಗಳು ಮಾಹಿತಿದಾರನಿಗಾಗಿ ಹುಡುಕಾಡಿದ್ದಾರೆ. ಕೊನೆಗೂ ಪತ್ತೆ ಹಚ್ಚಿದ ಆರೋಪಿಗಳು ನಡು ರಸ್ತೆಯಲ್ಲೇ ಆತನ ಮೇಲೆ ಲಾಂಗ್ ಬೀಸಿ ಹತ್ಯೆಗೆ ಯತ್ನಿಸಿದ್ದಾರೆ, ಆದರೆ ಅದೃಷ್ಟವಶಾತ್ ಆತ ಆರೋಪಿಗಳಿಂದ ಎಸ್ಕೇಪ್ ಆಗಿದ್ದಾನೆ. ಡ್ರಗ್ಸ್ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಮಾಹಿತಿದಾರನಿಗೆ ರಕ್ಷಣೆ ನೀಡದ ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.