ಬುಲೆಟ್ ಪ್ರೂಫ್ʼ ಬಕೆಟ್‌ ಹಾಕೊಂಡು ಕೋರ್ಟ್‌ಗೆ ಆಗಮಿಸಿದ ಪಾಕ್‌ ಮಾಜಿ ಪ್ರಧಾನಿ ʻಇಮ್ರಾನ್ ಖಾನ್

ಬುಲೆಟ್ ಪ್ರೂಫ್ʼ ಬಕೆಟ್‌ ಹಾಕೊಂಡು ಕೋರ್ಟ್‌ಗೆ ಆಗಮಿಸಿದ ಪಾಕ್‌ ಮಾಜಿ ಪ್ರಧಾನಿ ʻಇಮ್ರಾನ್ ಖಾನ್

ಲಾಹೋರ್(ಪಾಕಿಸ್ತಾನ): ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮಂಗಳವಾರ(ಏ.4) ಲಾಹೋರ್ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಅವರು ಬುಲೆಟ್ ಪ್ರೂಫ್ ಬಕೆಟ್‌ ಧರಿಸಿ ಬಂದಿದ್ದರು.

ಖಾನ್ ಕೋರ್ಟ್ ಆವರಣಕ್ಕೆ ಪ್ರವೇಶಿಸಿದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ, ಇಮ್ರಾನ್ ಖಾನ್ ಕಪ್ಪು ಶಿರಸ್ತ್ರಾಣದೊಂದಿಗೆ ನ್ಯಾಯಾಲಯಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ಅದು ಅವರ ರಕ್ಷಿಸುತ್ತಿವೆ.ಮಾರ್ಚ್‌ನಲ್ಲಿ ಇಮ್ರಾನ್ ಖಾನ್ ಜಮಾನ್ ಪಾರ್ಕ್ ನಿವಾಸದ ಹೊರಗೆ ಪಿಟಿಐ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಲಾಹೋರ್ ನ್ಯಾಯಾಲಯಕ್ಕೆ ಈ ವೇಷದಲ್ಲಿ ಬಂದಿದ್ದಾರೆ.