ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ : ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್
ದಾವಣಗೆರೆ: ಸಿದ್ದರಾಮಯ್ಯ ಡಿಕೆಶಿ ವಿರುದ್ಧ ನೀಡಿರುವ ಸಿಎಂ ಅಭ್ಯರ್ಥಿ ಹೇಳಿಕೆ ವಿಚಾರ ಭಾರೀ ಚರ್ಚೆಯಲ್ಲಿದ್ದು, ಇದರ ನಡುವೆ ಕಾಂಗ್ರೆಸ್ ನಲ್ಲಿ 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ಲಿಂಗಾಯತರಿಗೆ 70 ಜನರಿಗೆ ಸೀಟ್ ಕೊಡಲು ಕೇಳಿದ್ದೇವೆ. ರಾಜ್ಯದಲ್ಲಿ 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಸಿಎಂ ಆಗ್ತಾರೆ. ಲಿಂಗಾಯತರು 60 ರಿಂದ 70 ಸೀಟ್ ಗೆಲ್ಲುತ್ತಾರೆ. ಅದರಲ್ಲಿ ಮೆಜಾರಿಟಿ ಯಾರದ್ದು ಬರುತ್ತೋ ಅವರು ಸಿಎಂ ನನ್ನು ಆಯ್ಕೆ ಮಾಡುತ್ತಾರೆ ಎಂದರು. ಸಿಎಂ ರೇಸ್ ನಲ್ಲಿ ಲಿಂಗಾಯತರಲ್ಲಿ, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ್ ಇದ್ದಾರೆ ಎಂದರು.ಕಾಂಗ್ರೆಸ್ ನಲ್ಲಿ 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.