ಬಿಹಾರ: ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಮೊಬೈಲ್ ನುಂಗಿದ ಕೈದಿ!

ಬಿಹಾರ: ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಮೊಬೈಲ್ ನುಂಗಿದ ಕೈದಿ!

ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದ ಕೈದಿಯೊಬ್ಬ ಜೈಲು ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ತಪಾಸಣೆ ವೇಳೆ ಮೊಬೈಲ್ ನುಂಗಿದ ವಿಲಕ್ಷಣ ಘಟನೆ ವರದಿಯಾಗಿದೆ.

ಖೈಶರ್ ಅಲಿ ಎಂಬಾತ ಶನಿವಾರ ತಪಾಸಣೆ ವೇಳೆ ಮೊಬೈಲ್ ನುಂಗಿದ್ದಾನೆ.

ಆದರೆ, ಭಾನುವಾರ ಅಲಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅಲಿಯನ್ನು ತಕ್ಷಣವೇ ಗೋಪಾಲ್ಗಂಜ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕೈದಿಯ ಎಕ್ಸ್-ರೇ ವೇಳೆ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಕಂಡು ಬಂದಿದೆ ಎಂದು ಗೋಪಾಲ್ಗಂಜ್ ಜೈಲು ಅಧೀಕ್ಷಕ ಮನೋಜ್ ಕುಮಾರ್ ತಿಳಿಸಿದ್ದಾರೆ.

ಅಲಿಯನ್ನು ಜನವರಿ 17, 2020 ರಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (ಎನ್‌ಡಿಪಿಎಸ್ ಆಕ್ಟ್) ಅಡಿಯಲ್ಲಿ ಗೋಪಾಲ್‌ಗಂಜ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಆತ ಜೈಲಿನಲ್ಲಿದ್ದಾನೆ.‌