ಬಿಪಿನ್ ರಾವತ್ ಬಳಿಕ ಯಾರಾಗಲಿದ್ದಾರೆ ಮುಂದಿನ CDS? ಕೇಳಿಬರುತ್ತಿದೆ ಈ ಹೆಸರು
ನವದೆಹಲಿ : ಹೆಲಿಕಾಪ್ಟರ್ ಅಪಘಾತದಲ್ಲಿ ದೇಶದ ಮೊದಲ ಸಿಡಿಎಸ್ (CDS) ಜನರಲ್ ಬಿಪಿನ್ ರಾವತ್ (Bipin Rawat) ಮೃತಪಟ್ಟಿರುವುದು ಇಡೀ ದೇಶವನ್ನೇ ಆಘಾತಕ್ಕೀಡು ಮಾಡಿದೆ. ರಕ್ಷಣಾ ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ನೀಡಿದ ಜನರಲ್ ರಾವತ್ ಅವರ ಅಕಾಲಿಕ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
ಈ ಹುದ್ದೆಗೆ 3 ಹೆಸರುಗಳು ಕೇಳಿಬರುತ್ತಿದೆ. ಸೇನಾ ಮುಖ್ಯಸ್ಥ ಜನರಲ್ ಎಂಎಂ ನರ್ವಾಣೆ (MM Narvane) ಅವರ ಹೆಸರಿನ ಬಗ್ಗೆ ಒಮ್ಮತ ಮೂಡುವ ಸಾಧ್ಯತೆಯಿದೆ. ಮುಂದಿನ ಸಿಡಿಎಸ್ (CDS) ಆಗಿ, ಸರ್ಕಾರವು ಮೂರು ಸೇನೆಗಳ ಅಂದರೆ ಸೇನೆ, ನೌಕಾಪಡೆ (Navy) ಮತ್ತು ವಾಯುಪಡೆಗಳ (Aie Force) ಮುಖ್ಯಸ್ಥರ ಹೆಸರನ್ನು ಕೂಡಾ ಚರ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಜನರಲ್ ನರ್ವಾಣೆ ಅವರಲ್ಲದೆ, ಏರ್ ಫೋರ್ಸ್ ಚೀಫ್ ಮಾರ್ಷಲ್ ವಿಆರ್ ಚೌಧರಿ (VR Choudhary) ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಅವರನ್ನು ಕೂಡಾ ಈ ಹುದ್ದೆಗೆ ಪರಿಗಣಿಸಬಹುದು.
ಒಂದೆಡೆ, ಪೂರ್ವ ಲಡಾಖ್ನಲ್ಲಿ (Ladakh) ಚೀನಾದೊಂದಿಗೆ ಮಿಲಿಟರಿ ಮುಖಾಮುಖಿಯಾಗುತ್ತಿದ್ದರೆ, ಭಾರತ-ಪಾಕ್ (India Pak) ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಅಂತಹ ಪರಿಸ್ಥಿತಿಯಲ್ಲಿ, ಶೀಘ್ರದಲ್ಲೇ ಸಿಡಿಎಸ್ ಹುದ್ದೆಗೆ ನೇಮಕಾತಿ ಮಾಡುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ, ಈ ಹುದ್ದೆಗೆ ನಿಗದಿಪಡಿಸಿದ ಎಲ್ಲಾ ನಿಯತಾಂಕಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇದಕ್ಕಾಗಿ ಮೂರು ಸೇನೆಗಳ ಶಿಫಾರಸಿನ ಆಧಾರದ ಮೇಲೆ ಸಮಿತಿ ರಚಿಸಿ ಶೀಘ್ರವೇ ಹೊಸ ಸಿಡಿಎಸ್ ಹೆಸರನ್ನು ಪ್ರಕಟಿಸಲಾಗುವುದು. ಕುನ್ನೂರ್ ಅಪಘಾತದ ನಂತರ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಸಂಜೆ ಭದ್ರತಾ ಕ್ಯಾಬಿನೆಟ್ ಸಮಿತಿಯ (CCS) ತುರ್ತು ಸಭೆಯನ್ನು ಕರೆದಿದ್ದಾರೆ.
ಜನರಲ್ ರಾವತ್ ಅವರು ಮುಂದಿನ CDS ನೇಮಕಾತಿಗಾಗಿ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಆದರೆ ಅವರ ಅಕಾಲಿಕ ಮರಣದಿಂದಾಗಿ, ಈ ಕೆಲಸವು ಅಪೂರ್ಣವಾಗಿ ಉಳಿಯಿತು. ಬಿಪಿನ್ ರಾವತ್ ಅವಧಿ ಮಾರ್ಚ್ 2023ಕ್ಕೆ ಕೊನೆಗೊಳ್ಳುತ್ತಿತ್ತು.