ಫೆ. 5ರಿಂದ ಕಾಂಗ್ರೆಸ್‌ನ 'ಕರಾವಳಿ ಧ್ವನಿ ಯಾತ್ರೆ' ಆರಂಭ

ನವದೆಹಲಿ : ಮುಂದಿನ ಚುನಾವಣೆಗಾಗಿ ಕಾಂಗ್ರೆಸ್‌ನಿಂದ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಫೆಬ್ರವರಿ 5ರಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್‌ನ 'ಕರಾವಳಿ ಧ್ವನಿ ಯಾತ್ರೆ' ಆರಂಭವಾಗಲಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ 6 ಜಿಲ್ಲೆಗಳ ಪಕ್ಷದ ಪ್ರಮುಖರ ಕಾಂಗ್ರೆಸ್ ಸಭೆಯಲ್ಲಿ ಕರಾವಳಿ ಧ್ವನಿ ಯಾತ್ರೆಯನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ.
ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಈ ಸಭೆಯನ್ನುದ್ದೇಶಿಸಿ ಮಾತನಾಡಿ, ಫೆಬ್ರವರಿ 5ರಿಂದ ಫೆಬ್ರವರಿ9ರವರೆಗೆ ಮೊದಲ ಹಂತದ ಕರಾವಳಿ ಧ್ವನಿ ರಥಯಾತ್ರೆ ಪ್ರಾರಂಭವಾಗಲಿದೆ.
30 ದಿನಗಳ ಕಾಲ ನಡೆಯುವ ಯಾತ್ರೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಮಡಿಕೇರಿಯಲ್ಲಿ ಕರಾವಳಿ ಧ್ವನಿ ಯಾತ್ರೆ ನಡೆಯಲಿದೆ. ಬಳಿಕ ಎರಡನೇ ಹಂತದ ರಥಯಾತ್ರೆ ಫೆಬ್ರವರಿ 16 ರಿಂದ ಮಾರ್ಚ್ 10ರವರೆಗೆ ಎಲ್ಲಾ ಕಡೆ ಸಂಚರಿಸಲಿದೆ.
ಕಾಂಗ್ರೆಸ್‌ನ ಕರಾವಳಿ ಧ್ವನಿ ಯಾತ್ರೆಯ ನೇತೃತ್ವವನ್ನು ಬಿ.ಕೆ ಹರಿಪ್ರಸಾದ್, ಆರ್.ವಿ ದೇಶಪಾಂಡೆ, ಮಧು ಬಂಗಾರಪ್ಪ ಸೇರಿದಂತೆ ಕರಾವಳಿಯ ಪ್ರಮುಖ ನಾಯಕರು ವಹಿಸಲಿದ್ದಾರೆ. ರಾಜ್ಯದಲ್ಲಿ ಮತ್ತೆ ರಾಜಕೀಯ ರಣತಂತ್ರ ರೂಪಿಸೋದಕ್ಕಾಗಿ ಕಾಂಗ್ರೆಸ್ ಸಕಲ ಸಿದ್ಧತೆಯಲ್ಲಿ ತೊಡಗಿದಂತೂ ನಿಜ.