'ಕೋಟ್ಯಂತರ ಅವಕಾಶಗಳ ರನ್ವೇ ಘೋಷವಾಕ್ಯದೊಂದಿಗೆ ಏರ್ಶೋ ನಡೆಯಲಿದೆ. 'ಮಂಥನ್' ಹೆಸರಿನ ಸ್ಟಾರ್ಟ್ಅಪ್ ಮತ್ತು 'ಬಂಧನ್' ಕಾರ್ಯಕ್ರಮದಲ್ಲಿ ಹಲವು ಒಡಂಬಡಿಕೆಗಳಿಗೆ ಉದ್ಯಮಿಗಳು ಸಹಿಹಾಕಲಿದ್ದಾರೆ.ವಿವಿಧ ದೇಶಗಳ ರಕ್ಷಣಾ ಸಚಿವರೊಂದಿಗೆ ಸಂವಾದ ನಡೆಯಲಿದೆ.ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗದಂತೆ ಕ್ರಮವಹಿಸಬೇಕು ಎಂದು ಸಚಿವರು ಸಂಬಂಧಿಸಿದ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಾರ್ವಜನಿಕರು ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ. ಬ್ಯುಸಿನೆಸ್ ಟಿಕೆಟ್ಗೆ ₹ 5,000 ಶುಲ್ಕ ನಿಗದಿಪಡಿಸಲಾಗಿದೆ. ವಿದೇಶೀಯರಿಗೆ 150 ಡಾಲರ್ ಶುಲ್ಕವಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡಲು ಅವಕಾಶ ಕಲ್ಪಿಸುವ ಟಿಕೆಟ್ಗೆ ₹ 2,500 ಶುಲ್ಕವಿದೆ. ಕೇವಲ ವಿಮಾನಗಳನ್ನು ನೋಡುವ ಸ್ಥಳದ ಪ್ರವೇಶಕ್ಕೆ ₹ 1,000 ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಎರಡು ದಿನ ಉದ್ಯಮಕ್ಕೆ ಸಂಬಂಧಿಸಿದವರಿಗೆ (ಬ್ಯುಸಿನೆಸ್) ಮಾತ್ರವೇ ಪ್ರವೇಶ ಇರುತ್ತದೆ. ಕೊನೆಯ ಎರಡು ದಿನ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.