ಪ್ರಿಯಾಂಕ್‌ ಖರ್ಗೆ ಬಲಗೈ ಬಂಟ ಅರೆಸ್ಟ್‌

ಪ್ರಿಯಾಂಕ್‌ ಖರ್ಗೆ ಬಲಗೈ ಬಂಟ ಅರೆಸ್ಟ್‌

ಕಲಬುರ್ಗಿ: ಕಾಂಗ್ರೆಸ್ ನಾಯಕ ಪ್ರಿಯಾಂಕ್‌ ಖರ್ಗೆ ಬಲಗೈ ಬಂಟ ರಾಜು ಕಪನೂರ್‌‌‌‌‌‌‌ ಅವರನ್ನು ಜಿಲ್ಲೆಯ ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್‌‌ ತಿಂಗಳಿನಲ್ಲಿ ಗುರುಲಿಂಗಪ್ಪ ಎಂಬವರಿಂದ ಕಪನೂರ್‌‌‌, 2 ಕಂಟ್ರಿಮೇಡ್‌‌‌ ಗನ್‌‌ & 30 ಗುಂಡು ಖರೀದಿಸಿದ್ದರು. ರಾಜು ಕಪನೂರ್‌‌ ಹೆಸರು ಉಲ್ಲೇಖದ ಬಳಿಕ ಪೊಲೀಸರು 2 ನೋಟಿಸ್‌‌‌ ನೀಡಿದ್ದರು. ಆದರೆ, ಪೊಲೀಸರ ನೋಟಿಸ್‌ಗೆ ಕ್ಯಾರೆ ಎನ್ನದ ರಾಜು ಕಪನೂರ್‌‌ ಅನ್ನು ಈಗ ಪೊಲೀಸರು ಬಂಧಿಸಿದ್ದಾರೆ.