ನೇಪಾಳ ವಿಮಾನ ದುರಂತ; 5 ಸದಸ್ಯರ ತನಿಖಾ ಆಯೋಗ ರಚನೆ

ನೇಪಾಳ ವಿಮಾನ ದುರಂತ; 5 ಸದಸ್ಯರ ತನಿಖಾ ಆಯೋಗ ರಚನೆ

ಕಠ್ಮಂಡು: ನೇಪಳದ ಪೋಖರಾದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ 68 ಮಂದಿಯೂ ಪ್ರಾಣಕಳೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಪೈಲಟ್‌‌ ಏರ್‌ ಟ್ರಾಫಿಕ್‌‌‌ ಕಂಟ್ರೋಲ್‌‌ನಿಂದ ಲ್ಯಾಂಡಿಂಗ್‌‌ಗೆ ಅನುಮತಿ ಪಡೆದಿದ್ದರು & ಅದಕ್ಕೆ ಒಪ್ಪಿಗೆ ನೀಡಲಾಯಿತು. ಯೇತಿ ಏರ್‌‌ಲೈನ್ಸ್‌‌‌ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು 5 ಸದಸ್ಯರ ತನಿಖಾ ಆಯೋಗ ರಚಿಸಲಾಗಿದೆ.