ನನ್ನ ಗಮನಕ್ಕೆ ಬಾರದೆ ಯಾವುದೇ ನಿರ್ಧಾರ ಬೇಡ: ಹೆಚ್ಡಿಕೆ ಗೆ ದೇವೇಗೌಡರ ಸೂಚನೆ
ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೆ ಫೈಟ್ ವಿಚಾರವಾಗಿ ನನ್ನ ಗಮನಕ್ಕೆ ಬಾರದೆ ಯಾವುದೇ ನಿರ್ಧಾರ ಮಾಡುವುದು ಬೇಡ ಎಂದು ಹೆಚ್.ಡಿ ದೇವೇಗೌಡರು ಹೆಚ್.ಡಿ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ.
ಸಭೆ ರದ್ದಾದ ಬಳಿಕ ಕುಮಾರಸ್ವಾಮಿ ಜೊತೆ ಹೆಚ್.ಡಿ ದೇವೇಗೌಡರು ಚರ್ಚೆ ನಡೆಸಿದ್ದಾರೆ. ಹಾಸನ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಮಹತ್ವದ ಸಭೆ ಕರದಿದ್ದರು. ಆದರೆ ಹೆಚ್.ಡಿ ಕುಮಾರಸ್ವಾಮಿ ಗಮನಕ್ಕೆ ತರದೇ ಸಭೆ ಮುಂದೂಡಿ ಆದೇಶ ಹೊರಡಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿಗೆ ಹೆಚ್.ಡಿ ದೇವೇಗೌಡರು ಕೆಲ ಸೂಚನೆ ನೀಡಿದ್ದಾರೆ. ಹಾಸನ ಟಿಕೆಟ್ ವಿಚಾರವಾಗಿ ನಿರ್ಧಾರ ಬೇಡ ಎಂದು ಸೂಚನೆ ನೀಡಿದ್ದಾರೆ. ನನ್ನ ಗಮನಕ್ಕೆ ಬಾರದೇ ನಿರ್ಧಾರ ಬೇಡ ಎಂದು ಹೆಚ್.ಡಿ ದೇವೇಗೌಡರು ಸೂಚನೆ ನೀಡಿದ್ದಾರೆ.