ನನಗೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಿಲ್ಲುತ್ತಿರಲಿಲ್ಲ; ಇದೇ ನನ್ನ ಕೊನೆಯ ಚುನಾವಣೆ : ಹೆಚ್.ಡಿ ಕುಮಾರಸ್ವಾಮಿ

ನನಗೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಿಲ್ಲುತ್ತಿರಲಿಲ್ಲ; ಇದೇ ನನ್ನ ಕೊನೆಯ ಚುನಾವಣೆ : ಹೆಚ್.ಡಿ ಕುಮಾರಸ್ವಾಮಿ

ರಾಮನಗರ: ನನಗೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ಈ ಬಾರಿ ಚುನಾವಣೆ ನಿಲ್ಲುತ್ತಿರಲಿಲ್ಲ. ಆದರೆ ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಪ್ರತಿನಿತ್ಯ 16ರಿಂದ 18 ಗಂಟೆಗಳ ಕಾಲ ಪಕ್ಷ ಸಂಘಟನೆ ಮಾಡುತ್ತಿದ್ದೇನೆ.ಸಹಕಾರ ಸಂಘದಲ್ಲಿ ಲೂಟಿ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಅಧಿಕಾರಿಗಳು ಯಾವ ರೀತಿ ನಡೆದುಕೊಳ್ತಿದ್ದಾರೆ ಗೊತ್ತು.

ಅಧಿಕಾರ ಇಲ್ಲ ಎಂದು ನಾನು ಕುಗ್ಗಿಲ್ಲ, ಅಧಿಕಾರ ಸಿಕ್ಕಾಗ ದರ್ಪ ತೋರಿಲ್ಲ ಎಂದರು. ಎಂಎಲ್​ಸಿ ಸಿ.ಪಿ.ಯೋಗೇಶ್ವರ್​ ಸ್ವಾಭಿಮಾನಿ ನಡಿಗೆ ಮಾಡುತ್ತಿದ್ದಾರೆ. ಪೊಳ್ಳು ಮಾತಿಗೆ ಚನ್ನಪಟ್ಟಣ ಕ್ಷೇತ್ರದ ಜನರು ಸೊಪ್ಪು ಹಾಕುವುದಿಲ್ಲ. ನಮಗೆ ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ಸರ್ಟಿಫಿಕೇಟ್ ಬೇಡ. ಬಿ.ಎಸ್​.ಯಡಿಯೂರಪ್ಪ ವಿಧಾನಸೌಧದಲ್ಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಹೇಳಿದರು.