ನಗರದಲ್ಲಿ ರಾತ್ರಿ ವೇಳೆ ಓಡಾಟ: ಕಸಬಾ ಪೇಟೆಯ ಪೋಲಿಸರಿಂದ ನೂರಾರು ಮಂದಿ ಬಂಧನ, ಬಿಡುಗಡೆಗೆ ಪ್ರತಿಭಟನೆ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ರಾತ್ರಿ ವೇಳೆ ಅನುಮಾಸ್ಪದವಾಗಿ ರಸ್ತೆ ಬದಿಯಲ್ಲಿ ಓಡಾಡುತ್ತಿದ್ದ ನೂರಾರು ಜನರನ್ನು ಕಸಬಾಪೇಟ್ ಪೋಲಿಸ್ ಠಾಣೆಯ ಪೋಲಿಸರು ಬಂಧಿಸಿ ಅವರಿಂದ ಬೈಕ್ ಹಾಗೂ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ಎಐಎಂಐಎಂ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರು ಸೋಮವಾರ ತಡರಾತ್ರಿ ಏಕಾಏಕಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಎಐಎಂಐಎಂ ಪಕ್ಷದ ಜಿಲ್ಲಾ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯರಾದ ನಜೀರ್ ಅಹ್ಮದ್ ಹೊನ್ಯಾಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರದಲ್ಲಿ ಜನರು ರಾತ್ರಿ ಕೆಲಸದ ನಿಮಿತ್ತ ತಿರುಗಾಡುವುದು ಸಾಮಾನ್ಯ. ಬೆಳಿಗ್ಗೆ ಅವರವರ ಕೆಲಸದ ಹಿನ್ನೆಲೆಯಲ್ಲಿ ಎಲ್ಲರೂ ಸಿಗುವುದು ಮಾತಾಡಲು ಆಗುವುದಿಲ್ಲ. ಈ ದಿಸೆಯಲ್ಲಿ ರಾತ್ರಿ ಮನೆ ಎದುರು ಅಥವಾ ಪಕ್ಕದ ಓಣಿಗೆ ಹೋಗಿ ಪರಿಚಿತರ ಜೊತೆಗೆ ಕಾಲ ಕಳೆಯುತ್ತಿರುತ್ತಾರೆ. ಇದಕ್ಕೆ ಪೋಲಿಸರು ತಪ್ಪಾಗಿ ಅರ್ಥೈಸಿ ಅನುಮಾನಾಸ್ಪದ ವ್ಯಕ್ತಗಳೆಂದು ಬಂಧಿಸಿದರೇ ಹೇಗೆ? ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ನಂತರ ಠಾಣೆಯ ಪೊಲೀಸರು ಬಂಧಿತರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿ ಕಳಿಸಿದರು.
ಈ ಸಂದರ್ಭದಲ್ಲಿ ಎಐಎಂಐಎಂ ನ ಮುಖಂಡರಾದ ದಾದಾಪೀರ ಬೆಟಗೇರಿ, ಇರ್ಫಾನ್ ನಾಲ್ವತವಾಡ್, ಅಝರ್ ಬಳ್ಳಾರಿ, ಖಾಜಾಸಾಬ ಮುಲ್ಲಾ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.