ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿದ್ದ ವ್ಯಕ್ತಿಯ ನೇಮಕಾತಿಗೆ ನಕಾರ!

ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿದ್ದ ವ್ಯಕ್ತಿಯ ನೇಮಕಾತಿಗೆ ನಕಾರ!

ವದೆಹಲಿ: ಕೇಂದ್ರೀಯ ಸಶಸ್ತ್ರ ಸೇನಾಪಡೆಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಇತರೆ ಪಡೆಗಳಿಂದ ನಿರಾಕರಿಸಲ್ಪಟ್ಟಿರುವ ವ್ಯಕ್ತಿಯೊಬ್ಬ ದೆಹಲಿ ಉಚ್ಚ ನ್ಯಾಯಾಲಯದ ಕದ ಬಡಿದಿದ್ದಾರೆ.

ಬಲಗೈನ ಹಿಂಭಾಗ ಧಾರ್ಮಿಕ ಸಂಕೇತವನ್ನು ಹಚ್ಚೆ ಹಾಕಿಸಿಕೊಂಡಿರುವುದರಿಂದ ಅವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಆದರೆ ಈ ಹಚ್ಚೆಯನ್ನು ತೆಗೆಸಿಕೊಳ್ಳಲು ಅರ್ಜಿದಾರ ಒಪ್ಪಿರುವುದರಿಂದ, ಸೇನಾಪಡೆಗಳ ನೂತನ ವೈದ್ಯಕೀಯ ಮಂಡಳಿಯೆದುರು ಪರೀಕ್ಷೆಗೆ ಹಾಜರಾಗಲು ನ್ಯಾಯಪೀಠ ಸಮ್ಮತಿಸಿದೆ.

ಬಲಗೈನಲ್ಲಿ ಯೋಧ ಸೆಲ್ಯೂಟ್‌ ಮಾಡಬೇಕಾಗುತ್ತದೆ. ಇಂತಹ ಕೈಗೆ ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿರುವುದು ಗೃಹ ಸಚಿವಾಲಯದ ನಿಯಮಾವಳಿಗಳ ಪ್ರಕಾರ ತಪ್ಪು.

ಹಾಗಾಗಿ ಅವರನ್ನು ನೇಮಿಸಿಕೊಳ್ಳಲು ಪಡೆಗಳು ನಿರಾಕರಿಸಿವೆ. ಆದರೆ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ ಅರ್ಜಿದಾರ ತಾನು ಸಣ್ಣ ಲೇಸರ್‌ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆಸಿಕೊಳ್ಳಲು ಸಿದ್ಧ ಎಂದು ಒಪ್ಪಿಕೊಂಡಿದ್ದಾರೆ. ಅದನ್ನು ನ್ಯಾಯಪೀಠವೂ ಸಮ್ಮತಿಸಿದೆ.