ಸರ್ಕಾರ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡೋ ಅವಶ್ಯಕತೆ ಇರಲಿಲ್ಲ : ಡಿ.ಕೆ.ಶಿವಕುಮಾರ್ಕಿಡಿ
ಬೆಂಗಳೂರಿನಲ್ಲಿ ; ಪ್ರಧಾನಿ ಮೋದಿ ಆಗಮಿಸಿದ ಬಳಿಕ ಕೆಂಪೇಗೌಡ ಕಂಚಿನ ಪ್ರತಿಮೆ (Kempegowda Statue) ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಕಿಡಿಕಾರಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿ ಅವರು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಆಗಬೇಕಿತ್ತು. ನಾವು ಎಲ್ಲ ಸೌಕರ್ಯ ಅವರಿಗೆ ಕೊಟ್ಟಿದ್ದೇವೆ. ಪ್ರತಿಮೆಗೆ ಹಣ ಹಾಕುವುದು ಅವರಿಗೆ ದೊಡ್ಡ ವಿಷಯ ಅಲ್ಲ. ಇವರು ಏನೇನೋ ಲೆಕ್ಕಾಚಾರ ಹಾಕಿ ಮಾಡುತ್ತಿದ್ದಾರೆ. ಇದು ಬೆಸಿಕ್ ಕಾಮನ್ ಸೆನ್ಸ್. ಸರ್ಕಾರದ ದುಡ್ಡು ಹೇಗೆ ಬಳಸಬೇಕು ಅನ್ನೋದು ಬೆಸಿಕ್ ಕಾಮನ್ ಸೆನ್ಸ್. ದೊಡ್ಡ ಹೆಸರು ಮಾಡಬೇಕು ಅಂತಾ ಬಹಳ ಅರ್ಜೆಂಟ್ ನಲ್ಲಿ ಇದ್ದಾರೆ ಎಂದು ಗರಂ ಆದರು.
ಮೋದಿ (Narendra Modi) ಒಂದು ದಿನದ ಕಾರ್ಯಕ್ರಮಕ್ಕೆ 48 ಕೋಟಿ ಖರ್ಚು ವಿಚಾರದ ಕುರಿತು ಮಾತನಾಡಿ, ನೋಡ್ರಿ ತನ್ನ ವೈಭವ, ಪಾರ್ಟಿ ವೈಭವ ಅದಕ್ಕಾಗಿ ಎಷ್ಟು ಖರ್ಚಾಗ್ತಿದೆ ಅನ್ನೋದಕ್ಕೆ ನಿಮ್ಮ ಬಳಿಯೇ ಮಾಹಿತಿ ಇದೆ. ಏನು ವೈಭವ ಮಾಡಿಕೊಳ್ಳಲಿ ಎಷ್ಟೇ ಜನ ಕರೆಸಲಿ ಏನೇ ಮಾಡಿದ್ರೂ ಜನ ಇವರನ್ನು ಕಿತ್ತೊಗೆಯಬೇಕು ಅಂತ ಸಂಕಲ್ಪ ಮಾಡಿದ್ದಾರೆ ಎಂದರು.