ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಮನೆಗಳು ಜಲಾವೃತ; ಸಂಚಾರಕ್ಕೆ ಅಡ್ಡಿ

ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಮನೆಗಳು ಜಲಾವೃತ; ಸಂಚಾರಕ್ಕೆ ಅಡ್ಡಿ
ಬೆಂಗಳೂರು; ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರು: ಬೆಂಗಳೂರು ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬುಧವಾರ ಸಂಜೆ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಹಲವು ತಗ್ಗು ಪ್ರದೇಶದ ವಸತಿ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ವಸ್ತುಗಳು ಹಾನಿಗೊಳಗಾಗಿವೆ. ಬಹುಮಹಡಿ ಮನೆಗಳ ಪಾರ್ಕಿಂಗ್"ಗೆ ನೀರು ನುಗ್ಗಿದ ಪರಿಣಾಣ ಅನೇಕ ವಾಹನಗಳು ಮುಳುಗಡೆಗೊಂಡಿದ್ದವು. ಕೆಲವು ಕಡೆ ಮನೆ ಹೊರ ನಿಲ್ಲಿಸಿದ್ದ ಬೈಕ್, ಕಾರು, ಆಟೋ ಸೇರಿದಂತೆ ಇನ್ನಿತರೆ ವಾಹನಗಳು ನೀರಿನಲ್ಲಿ ಮುಳುಗಿದ್ದವು. ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಲು ಆರಂಭವಾಗಿದ್ದರಿಂದ ನಿವಾಸಿಗಳು ವಸ್ತುಗಳ ರಕ್ಷಣೆಗೆ ರಾತ್ರಿ ಇಡೀ ಪರದಾಡಿದರುಭಾರೀ ಮಳೆಯಿಂದಾಗಿ ಹಲವೆಡೆ ಚರಂಡಿಗಳು ತುಂಬಿ ನೀರು ಹೊರಬರಲು ಆರಂಭವಾಗಿದ್ದವು. ಶಿವಾನಂದ ಸರ್ಕಲ್ ರೈಲ್ವೆ ಕೆಳಸೇತುವೆ ಕೆರೆಯಾಗಿ ಮಾರ್ಪಟ್ಟಿತ್ತು. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ವಿಲ್ಸನ್ ಗಾರ್ಡನ್ನ ರಸ್ತೆಗಳು ನೀರಿನಲ್ಲಿ ಮುಳುಗಡೆಗೊಂಡಿದ್ದವು. ಇನ್ನು ಬಸವನಗುಡಿ, ಜಯನಗರ, ಚಾಮರಾಜಪೇಟೆ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಕೆಆರ್ ಮಾರುಕಟ್ಟೆ, ಬಿಟಿಎಂ, ತಿಲಕ್ ನಗರ, ಬಸವೇಶ್ವರ ನಗರ, ಆರ್ ಟಿ ನಗರ, ಹೆಬ್ಬಾಳ, ಹೂಡಿ ಮತ್ತು ಕೆಆರ್ ಪುರಂಗಳಲ್ಲಿಯೂ ಮಳೆಯಿಂದಾಗಿ ಭಾರೀ ಸಮಸ್ಯೆಗಳು ಎದುರಾಗಿತ್ತು.ಮರಗಳು ನೆಲಕ್ಕುರುಳಿರುವ ಮೂರು ಘಟನೆಗಳನ್ನು ಬಿಬಿಎಂಪಿ ನಿಯಂತ್ರಣ ಕೊಠಡಿ ವರದಿ ಮಾಡಿದ್ದು, ಹಲವೆಡೆ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿದ್ದರಿಂದ ವ್ಯಾಪಾರ ವಹಿವಾಟುಗಳಿಗೆ ಭಾರೀ ಸಮಸ್ಯೆ ಎದುರಾಗಿದೆ. ರಸೆಲ್ ಮಾರ್ಕೆಟ್ನಲ್ಲಿ, ಸ್ಟೋರ್ ರೂಂಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದ್ದು ಕಂಡು ಬಂದಿದೆ. ನೀರು ನುಗ್ಗಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತಮ್ಮ ಸರಕುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಚಿನ್ನಪ್ಪ ಗಾರ್ಡನ್ ಸಮೀಪ ಚರಂಡಿಯಿಂದ ಎಂಟು ಮನೆಗಳಿಗೆ ಕೊಳಚೆ ನೀರು ನುಗ್ಗಿ ಸಮಸ್ಯೆಗಳು ಎದುರಾಗಿದೆ.ಇಲ್ಲಿನ ನಿವಾಸಿ ಪ್ರಶಾಂತ್ ಮಾತನಾಡಿ, ಚರಂಡಿ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ಬಂದಾಗಲೆಲ್ಲಾ ಇಲ್ಲಿನ ಮನೆಗಳು ಜಲಾವೃತವಾಗುತ್ತಿವೆ. ಈ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬುಧವಾರ ರಾತ್ರಿ, ನನ್ನ ಮನೆಯಲ್ಲಿ ಎರಡು ಅಡಿಗಳಷ್ಟು ನೀರು ತುಂಬಿತ್ತು. ಇದರಿಂದ ಎಲ್ಲಾ ದಿನಸಿ ವಸ್ತುಗಳು ಹಾನಿಗೊಂಡಿವೆ.ಫ್ರಿಡ್ಜ್ನಂತಹ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಹಾಸಿಗೆಯ ಮೇಲೆ ಮಲಗಿದ್ದ ನನ್ನ ಅಜ್ಜಿಯನ್ನು ನಾವು ಮೊದಲ ಮಹಡಿಗೆ ಸ್ಥಳಾಂತರಿಸಬೇಕಾಗಿತ್ತು. ಇತರ ಏಳು ಮನೆಗಳಿಗೂ ನೀರು ನುಗ್ಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆಫ್ರಿಡ್ಜ್ನಂತಹ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಹಾಸಿಗೆಯ ಮೇಲೆ ಮಲಗಿದ್ದ ನನ್ನ ಅಜ್ಜಿಯನ್ನು ನಾವು ಮೊದಲ ಮಹಡಿಗೆ ಸ್ಥಳಾಂತರಿಸಬೇಕಾಗಿತ್ತು. ಇತರ ಏಳು ಮನೆಗಳಿಗೂ ನೀರು ನುಗ್ಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ರಾಜಕಾಲುವೆ ನಿರ್ಮಾಣದಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ದೂರಿದರು. ಬಳಿಕ ಬಿಬಿಎಂಪಿ ಸಿಬ್ಬಂದಿ ಪಂಪ್ ಬಳಸಿ ನೀರು ಹೊರ ಹಾಕಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, ಎಚ್ಎಸ್ಆರ್ ಲೇಔಟ್ ಸೆಕ್ಟರ್ 6, ಅನುಗ್ರಹ ಲೇಔಟ್, ಬಿಟಿಎಂ ಲೇಔಟ್, ಶಿವಾಜಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ. ಒಟ್ಟಾರೆಯಾಗಿ, ಸುಮಾರು 56 ಮನೆಗಳು ಜಲಾವೃತಗೊಂಡಿದ್ದರಿಂದ ಕೆಲವು ಗಂಟೆಗಳ ಕಾಲ ಸಮಸ್ಯೆ ಎದುರಾಗಿತ್ತು.ಬಿಬಿಎಂಪಿ ಸಿಬ್ಬಂದಿಗಳು ಮಳೆನೀರಿನ ಚರಂಡಿಗಳನ್ನು ತೆರವುಗೊಳಿಸುತ್ತಿದೆ. ಹೀಗಾಗಿ ಭಾರೀ ಮಳೆಯ ಹೊರತಾಗಿಯೂ, ಯಾವುದೇ ಗಂಭೀರ ಹಾನಿ ಮತ್ತು ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಮಹದೇವಪುರ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಮಾತನಾಡಿ, ಬುಧವಾರ ರಾತ್ರಿ ಭಾರೀ ಮಳೆಯ ಹೊರತಾಗಿಯೂ, ಹೆಚ್ಚಿನ ಹಾನಿಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.