ಧಾರವಾಡ ಕುಂದಗೋಳದಲ್ಲಿ ಅಮಿತ್‌ ಶಾ ರೋಡ್‌ : ಪೊಲೀಸರಿಂದ ಹೈ ಸೆಕ್ಯೂರಿಟಿ

ಧಾರವಾಡ ಕುಂದಗೋಳದಲ್ಲಿ ಅಮಿತ್‌ ಶಾ ರೋಡ್‌ : ಪೊಲೀಸರಿಂದ ಹೈ ಸೆಕ್ಯೂರಿಟಿ

ಧಾರವಾಡ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಧಾರವಾಡ, ಬೆಳಗಾವಿ ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಇಂದು ಧಾರವಾಡದಲ್ಲಿ ಕುಂದಗೋಳದಲ್ಲಿ ಅಮಿತ್‌ ಶಾ ರೋಡ್‌ ನಡೆಸಲಿದ್ದು, ಹೈ ಸೆಕ್ಯೂರಿಟಿ, ಪೊಲೀಸ್‌ ಬಿಗಿ ಬಂದೋಬಸ್ತ್‌ ವಹಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಕುಂದಗೋಳ ಸುತ್ತಮುತ್ತ ಪೊಲೀಸ್‌ ಭದ್ರತೆ ವಹಿಸಲಾಗಿದೆ. ಮೂವರು ಎಸ್‌ಪಿ, 12ಡಿವೈಎಸ್‌ಪಿ 31 ಸಿಪಿಐ, 56 ಪಿಎಸ್‌ಐ, 103ಎಎಸ್‌ಐ, 6 ಕೆಎಸ್‌ಆರ್‌ಪಿ, 1075 ಕಾನ್ಸ್ಟೇಬಲ್‌ಗಳು, ಶ್ವಾನದಳ, ಬಾಂಬ್‌ ನಿಷ್ಕ್ರೀಯ ದಳ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸಕಲ ಭದ್ರತೆಯನ್ನು ಪರಿಶೀಲನೆ ಮಾಡಲಾಗಿದೆ.

ಕೇಂದ್ರ ಗೃಹ ಸಚಿವ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಅಧೀನ ಪ್ರದೇಶದಲ್ಲಿ ಸ್ಥಾಪನೆಗೊಳ್ಳುತ್ತಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭಾಗಿಯಾಗಿದ್ದಾರೆ.

ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕುಲತಿಗಳು ಧಾರವಾಡದಲ್ಲಿ ಆರಂಭಗೊಳ್ಳುತ್ತಿರುವ ನಮ್ಮ ವಿವಿ ಕ್ಯಾಂಪಸ್ ಗೆ ಅಗತ್ಯ ಸಿಬ್ಬಂದಿ, ಪ್ರಯೋಗಾಲಯ ನೀಡಿ, ಮುಂದಿನ ದಿನಗಳಲ್ಲಿ ವಿಶ್ವಗುಣಮಟ್ಟದ ಸ್ವತಂತ್ರ ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ರೂಪಿಸಲಾಗುವುದು. ಅದರಂತೆ ಕೃಷಿ ವಿಶ್ವವಿದ್ಯಾಲಯ ಅಧೀನದ ಸುಮಾರು 46 ಎಕರೆ ಭೂಮಿಯನ್ನು ವಿವಿ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು