ಧರ್ಮದ ದಂಗಲ್ ಗೆ ಶಣೇಶ್ವರ ಕಾರಣ : ಪ್ರಸನ್ನ ಭಟ್ ಗೂರೂಜಿ
ಹುಬ್ಬಳ್ಳಿ: ಇತ್ತಿಚೆಗೆ ನಡೆಯುತ್ತಿರುವ ಧರ್ಮದ ದಂಗಲ್ ಗೆ ಶಣೇಶ್ವರನೇ ಕಾರಣನಂತೆ. ಇದು ಜ್ಯೋತಿಷ್ಯ ಶಾಸ್ತ್ರದಲ್ಲಿಯೇ ಇದೆ ಅಂತೆ ಇಂತಹ ವಿಷಯವನ್ನು ಹುಬ್ಬಳ್ಳಿಯ ಜ್ಯೋತಿಷಿ ಪ್ರಸನ್ನ ಭಟ್ ಗೂರೂಜಿ ಹೇಳಿದ್ದಾರೆ.
ಮನುಷ್ಯ ಜೀವನಕ್ಕೆ ಎಲ್ಲ ವ್ಯವಸ್ಥೆ ಇರುವುದೇ ಧರ್ಮದಲ್ಲಿ. ಎಲ್ಲ ಧರ್ಮದಲ್ಲು ವ್ಯಕ್ತಿ ಮನಸ್ಸಿನಿಂದ ಆನಂದದಿಂದ ಇರಬೇಕು ಎಂದು ಸೂಚಿಸುತ್ತದೆ. ಯಾವ ಧರ್ಮ ಹಾಳಾಗಲಿ ಎಂದು ಬಯಸುವುದಿಲ್ಲ. ಎಲ್ಲರೂ ಸುಸಂಸ್ಕೃತದಿಂದ ಬದುಕಬೇಕು, ಅನ್ಯೋನ್ಯತೆಯಿಂದ ಬದುಕಬೇಕು ಎಂಬುದನ್ನು ಎಲ್ಲ ಧರ್ಮಗಳು ಸಾರುತ್ತವೆ. ಆದರೆ ಶಣೇಶ್ವರ ಮಹಾಗ್ರಹ ಮತ್ತೆ ತನ್ನ ಸ್ವ-ಕ್ಷೇತ್ರಕ್ಕೆ ಬಂದಾಗ ತಮ್ಮ ತಮ್ಮ ಧರ್ಮಗಳನ್ನು ಉಳಿಸಿಕೊಳ್ಳಲು ಪ್ರಚೋದನೆ ನೀಡುತ್ತಾನೆ. ಆಗ ಜನರಲ್ಲಿ ನಿಮ್ಮ ನಿಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು, ಧರ್ಮದಿಂದ ಬದುಕಬೇಕು ಎಂಬ ಬುದ್ದಿಯನ್ನು ಕೊಟ್ಟು ಅದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಿ ಒಮ್ಮೆಲೆ ಎಲ್ಲರನ್ನೂ ಶಾಂತಗೊಳಿಸುವನು. ಹಾಗಾಗಿ ಇದೀಗ ನಡೆಯುತ್ತಿರುವ ಧರ್ಮದ ದಂಗಲ್ ಗೆ ಮಹಾಶಣೇಶ್ವರ ಕಾರಣನಾಗಿದ್ದಾನೆ ಇದು ಜ್ಯೋತಿಷಿ ಶಾಸ್ರ್ತದಲ್ಲೇ ಇದೆ ಎಂದು ತಿಳಿಸಿದ್ದಾರ
ನೈನ್ ಲೈವ್ ನ್ಯೂಸ್ ಹುಬ್ಬಳ್ಳಿ