ದೆಹಲಿಯಲ್ಲಿ ಮತ್ತೆ 4 ಒಮಿಕ್ರಾನ್ ಕೇಸ್ ಪತ್ತೆ: ದೇಶದಲ್ಲಿ ಒಟ್ಟು 49ಕ್ಕೆ ಏರಿದ ಸೋಂಕಿತರ ಸಂಖ್ಯೆ

ದೆಹಲಿಯಲ್ಲಿ ಮತ್ತೆ 4 ಒಮಿಕ್ರಾನ್ ಕೇಸ್ ಪತ್ತೆ: ದೇಶದಲ್ಲಿ ಒಟ್ಟು 49ಕ್ಕೆ ಏರಿದ ಸೋಂಕಿತರ ಸಂಖ್ಯೆ

ದೆಹಲಿಯಲ್ಲಿ ಮತ್ತೆ 4 ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ರಾಜಸ್ಥಾನದಲ್ಲಿ ಕೂಡ 4 ಕೇಸ್ ದಾಖಲಾಗಿದ್ದು, ಅಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ತಲುಪಿದೆ. ನಿನ್ನೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್ ದೃಢಪಟ್ಟಿತ್ತು. ಅವರು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದವರಾಗಿದ್ದು, ಕೊವಿಡ್ 19 ಪಾಸಿಟಿವ್ ಬಂದಿತ್ತು. ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿತ್ತು. ಹಾಗೇ, ಮಹಾರಾಷ್ಟ್ರದಲ್ಲಿ ಕೂಡ ಇಬ್ಬರು ದುಬೈನಿಂದ ಆಗಮಿಸಿದವರಲ್ಲಿ ಒಮಿಕ್ರಾನ್ ಇರುವುದು ಗೊತ್ತಾಗಿತ್ತು. ಒಟ್ಟಾರೆ ನಿನ್ನೆ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 41ಕ್ಕೆ ತಲುಪಿತ್ತು.

ಇಂದು ದೆಹಲಿಯಲ್ಲಿ ಪತ್ತೆಯಾದ ನಾಲ್ವರಲ್ಲಿ ಎಲ್ಲರಿಗೂ ಸೌಮ್ಯ ಲಕ್ಷಣವಿದೆ. ದೆಹಲಿಯಲ್ಲಿರುವ ಒಟ್ಟಾರೆ ೬ ಸೋಂಕಿತರಲ್ಲಿ ಒಬ್ಬರು ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಹಾಗಿದ್ದಾಗ್ಯೂ ಸದ್ಯ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 35 ಕೊವಿಡ್ ಸೋಂಕಿತರು ಮತ್ತು 3 ಒಮಿಕ್ರಾನ್ ಶಂಕಿತರು ಅಡ್ಮಿಟ್ ಆಗಿದ್ದಾರ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.