ದಾವಣಗೆರೆ ಹೆದ್ದಾರಿ ಸಂಚಾರಕ್ಕೆ ಹೊಸ ರೂಲ್ಸ್ : ಓವರ್ ಟೇಕ್ ಶಿಸ್ತು ಉಲ್ಲಂಘಿಸಿದ್ರೆ 500 ರೂ ದಂಡ ಫಿಕ್ಸ್

ದಾವಣಗೆರೆ: ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದನ್ನ ತಡಗಟ್ಟಲು ಹೊಸ ಹೊಸ ನಿಯಮ ಜಾರಿಗೆ ಬರುತ್ತಲೇ ಇದೆ. ಆದರೆ ಜನರು ಮಾತ್ರ ಈ ನಿಯಮಕ್ಕೆ ಡೋಂಟ್ ಕ್ಯಾರ್ ಎನ್ನುತ್ತಿದ್ದಾರೆ.
ಇದೀಗ ಹೆದ್ದಾರಿಯಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದಾರೆ.
ಸಂಚಾರ ನಿಯಮಗಳ ಜಾಗೃತಿಗಾಗಿ ನಗರದಲ್ಲಿ ಬೈಕ್ ಜಾಥ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವ್ಯಾಪ್ತಿಯಲ್ಲಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48 ಹಾಯ್ದು ಹೋಗಿದೆ. ದಾವಣಗೆರೆ ಜಿಲ್ಲೆಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಸರ್ಕಾರ ನಿನ್ನೆ ಸಂಜೆಯಿಂದ ಪೈಲೆಟ್ ಪ್ರಾಜೆಕ್ಟ್ ಯೊಂದನ್ನ ಆರಂಭಿಸಿದೆ. ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ದುರಂತಕ್ಕೆ ಕಡಿವಾಣ ಹಾಕುವುದು ಈ ಯೋಜನೆಯ ಉದ್ದೇಶ.
ಅದೇ ಪಥ ಶಿಸ್ತು ಅಂತಾ. ದಾವಣಗೆರೆ ಜಿಲ್ಲೆಯಲ್ಲಿ ಆರು ಲೈನ್ ಹೆದ್ದಾರಿ ಇದೆ. ಆ ಕಡೆ ಮೂರು ಲೈನ್ ಈ ಕಡೆ ಮೂರು ಲೈನ್. ಈಗ ಹೊಸ ನಿಯಮದ ಪ್ರಕಾರ ಹೆಚ್ಚು ವೇಗವಾಗಿ ಹೋಗುವ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಒಳ ಪಥ ಅಂದ್ರೆ ಇನ್ನರ್ ಲೈನ್ ನಿಗದಿ ಮಾಡಲಾಗಿದೆ. ಇದೀಗ ಹೊಸ ನಿಯಮ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ್ರೆ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮಾರ ಅಳವಡಿಸಲಾಗಿದೆ.