ಗ್ರಾಮೀಣ ಮಟ್ಟಕ್ಕೂ ಸ್ಕೇಟಿಂಗ್ ವಿಸ್ತರಣೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಸ್ಕೇಟಿಂಗ್ ಗ್ರಾಮೀಣ ಮಟ್ಟಕ್ಕೂ ವಿಸ್ತರಿಸಿದ್ದು, ಇನ್ನಷ್ಟು ಪ್ರತಿಭೆಗಳು ಹೊರ ಬರಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಸವನಗುಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕ್ರೀಡೆಗೆ ಉತ್ಸಾಹ ಬಹಳ ಮುಖ್ಯ. ಈ ಸ್ಕೇಟಿಂಗ್ ಕ್ರೀಡಾಂಗಣ ದೇಶ ಹಾಗೂ ವಿಶ್ವದಲ್ಲಿಯೇ ಅತ್ಯಂತ ಉತ್ತಮ ಕ್ರೀಡಾಂಗಣವಾಗಿದೆ. ನಮ್ಮ ಸರ್ಕಾರ ಐದು ರಾಷ್ಟ್ರೀಯ ಸ್ಕೇಟರ್ ಗಳನ್ನು ದತ್ತು ಒಡೆದು ಪ್ಯಾರಿಸ್ ಒಲಿಂಪಿಕ್ಸ್ ವರೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.