ಗೃಹ ಸಚಿವ ಆರಗ, ಡಿಜಿಪಿ ಸೂದ್‌ ಹೆಸರಲ್ಲಿ ಐಡಿ ಮಾಡಿದ್ದ ಶಂಕಿತ ಉಗ್ರ ಶಾರೀಕ್‌

ಗೃಹ ಸಚಿವ ಆರಗ, ಡಿಜಿಪಿ ಸೂದ್‌ ಹೆಸರಲ್ಲಿ ಐಡಿ ಮಾಡಿದ್ದ ಶಂಕಿತ ಉಗ್ರ ಶಾರೀಕ್‌

ಮಂಗಳೂರು  ;  ಕುಕ್ಕರ್‌ ಸ್ಫೋಟ ಪ್ರಕರಣದಪ್ರಮುಖ ಆರೋಪಿ, ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಗೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸುವ ವಿಚಾರಗಳು ಬಹಿರಂಗವಾಗುತ್ತಿವೆ.

ಈತ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್‌ ಮಾಡಿರುವ ಮಾಹಿತಿ ಲಭ್ಯವಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಕಲಿ ಆಧಾರ್‌ ಕಾರ್ಡ್‌ ಮಾಡಿದ್ದು, ಆಧಾರ್‌ ಕಾರ್ಡ್‌ನಲ್ಲಿ ಪೋಟೊ ಮಾತ್ರ ಆರಗ ಜ್ಞಾನೇಂದ್ರ ಅವರದು. ಪಕ್ಕದಲ್ಲೇ ಇರುವ ಹೆಸರು ಮೊಹಮ್ಮದ್‌ ಶಾರೀಕ್‌ನದ್ದು ಎಂಬುದು ಪತ್ತೆಯಾಗಿದೆ.

ರಾಜ್ಯ ಪೊಲೀಸ್‌ ಮಹಾ ನಿರ್ದೆಶಕರ ಹೆಸರಿನಲ್ಲೂ ಫೇಕ್‌ ಐಡಿ ಮಾಡಿದ್ದು, ಪ್ರವೀಣ್‌ ಸೂದ್‌ ಪೋಟೊ ಜೊತೆಗೆ ಉಗ್ರ ಶಾರಿಕ್‌ ಹೆಸರು ಇದೆ. ಆಧಾರ್‌, ವೋಟರ್‌ ಐಡಿ, ಪ್ಯಾನ್‌ ಕಾರ್ಡ್‌ನಲ್ಲೂ ನಕಲಿ ಪೋಟೊ ಐಡಿ ಕಾರ್ಡ್‌ ಬಳಸಿ ಏನೂ ಬೇಕಾದರೂ ಮಾಡಬಹುದು. ಹೀಗಾಗಿ ಬೇರೆಯವರಿಗೆ ಪೋಟೊ ಸಿಗದಂತೆ ಎಲ್ಲರೂ ಎಚ್ಚರವಾಗಿರಬೇಕು, ಇಲ್ಲದಿದ್ದರೆ ಜೈಲು ಸೇರುವ ಸನ್ನಿವೇಶ ಎದುರಾಗಬಹುದು.