ಕ್ಲಾಸ್ ಮಾಸ್ ನ ಸಮ್ಮಿಶ್ರಣದೊಂದಿಗೆ ಅಬ್ಬರಿಸಿದ ಡಿಬಾಸ್ ಕ್ರಾಂತಿ

ಕ್ಲಾಸ್ ಮಾಸ್ ನ ಸಮ್ಮಿಶ್ರಣದೊಂದಿಗೆ ಅಬ್ಬರಿಸಿದ ಡಿಬಾಸ್ ಕ್ರಾಂತಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕ್ರಾಂತಿ ಚಿತ್ರದ ಟ್ರೈಲರ್ ಅಂತೂ ಬಿಡುಗಡೆಯಾಗಿದ್ದು, ಯುಟ್ಯೂಬ್ ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ.

ಅಷ್ಟಕ್ಕೂ ಈ ಚಿತ್ರದ ಟ್ರೈಲರ್ ನಲ್ಲಿ ಏನಿದೆ ಎನ್ನುವುದನ್ನು ನೋಡುತ್ತಾ ಹೋದಾಗ ಸರ್ಕಾರಿ ಶಾಲೆಗಳ ಉಳಿವಿನ ಕತೆಯನ್ನು ಬೇರೆ ಆಯಾಮದಲ್ಲಿ ವಿಭಿನ್ನವಾಗಿ ಹೇಳುವುದರ ಜೊತೆಗೆ ಚಿತ್ರವನ್ನು ಮಾಸ್ ಹಾಗೂ ಕ್ಲಾಸ್ ಎರಡಕ್ಕೂ ಒಗ್ಗುವಂಥ ಪಕ್ಕಾ ಮನರಂಜನೆಯ ಪ್ಯಾಕ್ ಮಾಡಲಾಗಿದೆ.

ಈ ಚಿತ್ರದ ನೋಡಿದ ಪ್ರೇಕ್ಷಕರೆಲ್ಲಾ ದರ್ಶನ್ ಅವರ ಹೊಸ ಅವತಾರಕ್ಕೆ ಪೂರ್ತಿ ಫಿದಾ ಆಗಿದ್ದು,ಬಾಕ್ಸ್ ಆಫೀಸ್ ನಲ್ಲಿ ಕ್ರಾಂತಿ ದೊಡ್ಡ ಸೌಂಡ್ ಮಾಡುವುದು ಪಕ್ಕಾ ಎನ್ನುವಂತಾಗಿದೆ. ಡಿ ಬಾಸ್ ಸ್ಕ್ರೀನ್ ಪ್ರೆಸೆನ್ಸ್, ಆಕ್ಷನ್, ಮೇಕಿಂಗ್, ಫೈಟ್ಸ್, ಸೆಟ್ಸ್ ಗಳು ಡೈಲಾಗ್ಸ್ ಚಿಂದಿಯಾಗಿದ್ದು.ಜೊತೆಗೆ ಉತ್ತಮ ಸಾಮಾಜಿಕ ಕಳಕಳಿ ಇರುವ ಕಂಟೆಂಟ್ ಇರುವುದು ಪಕ್ಕಾ ಎಂದು ಟ್ರೈಲರ್ ನಲ್ಲಿ ತಿಳಿಯುತ್ತಿದೆ. ಒಟ್ಟಿನಲ್ಲಿ ಈ ಚಿತ್ರವು ಕಮರ್ಷಿಯಲ್ ಅಂಶಗಳ ಜೊತೆಗೆ ಪಕ್ಕಾ ಎಂಟರ್ಟೈನ್ಮೆಂಟ್ ಪ್ಯಾಕ್ ಎನ್ನುವುದನ್ನು ಈ ಟ್ರೈಲರ್ ಸಾರುತ್ತದೆ.

ಈ ಚಿತ್ರದ ಟ್ರೈಲರ್ ನಲ್ಲಿ ರಚಿತಾರಾಮ್, ರವಿಶಂಕರ್, ಸುಮಲತಾ ಅವರ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ.