ಕುರಿಗಾರರಿಗೆ ಸಿಎಂ ಬೊಮ್ಮಾಯಿ ಬಂಪರ್ ಗಿಫ್ಟ್ : ಕುರಿಗಾರರಿಗೆ ತಲಾ 20 ಕುರಿ, 1 ಮೇಕೆ ನೀಡುವ ಯೋಜನೆ ಜಾರಿ

ಕುರಿಗಾರರಿಗೆ ಸಿಎಂ ಬೊಮ್ಮಾಯಿ ಬಂಪರ್ ಗಿಫ್ಟ್ : ಕುರಿಗಾರರಿಗೆ ತಲಾ 20 ಕುರಿ, 1 ಮೇಕೆ ನೀಡುವ ಯೋಜನೆ ಜಾರಿ

ಬೆಂಗಳೂರು : ರಾಜ್ಯ ಸರ್ಕಾರವು ಕುರಿಗಾಹಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರತಿಯೊಬ್ಬ ಕುರಿಗಾರರಿಗೂ 20 ಕುರಿ, ಒಂದು ಮೇಕೆಯನ್ನು ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ಪ್ರತಿಯೊಬ್ಬ ಕುರಿಗಾರರಿಗೂ 20 ಕುರಿ ಮತ್ತು 1 ಮೇಕೆ ನೀಡಲಾಗುವುದು. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಇದಕ್ಕಾಗಿ 324 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಇದಕ್ಕಾಗಿ 324 ಕೋಟಿ ರೂ. ಮೀಸಲಿಟ್ಟಿದ್ದೇವೆ. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.