ಮುರುಘಾಶ್ರೀ ವಿರುದ್ಧ ತಿರುಗಿಬಿದ್ದ ಸಮಾಜದ ಮುಖಂಡರು.! ಚಾರ್ಜ್​​​​ಶೀಟ್ ಅಂಶ ಬಯಲಾದ ಬಳಿಕ ಶ್ರೀಗಳ ಮೇಲೆ ಶಾಮನೂರು ಶಿವಶಂಕರಪ್ಪ ಗರಂ.!

ಮುರುಘಾಶ್ರೀ ವಿರುದ್ಧ ತಿರುಗಿಬಿದ್ದ ಸಮಾಜದ ಮುಖಂಡರು.! ಚಾರ್ಜ್​​​​ಶೀಟ್ ಅಂಶ ಬಯಲಾದ ಬಳಿಕ ಶ್ರೀಗಳ ಮೇಲೆ ಶಾಮನೂರು ಶಿವಶಂಕರಪ್ಪ ಗರಂ.!

ಚಿತ್ರದುರ್ಗ : ಮುರುಘಾಶ್ರೀ ವಿರುದ್ಧ ಸಮಾಜದ ಮುಖಂಡರು ತಿರುಗಿಬಿದಿದ್ದು, ಚಾರ್ಜ್​​​​ಶೀಟ್ ಅಂಶ ಬಯಲಾದ ಬಳಿಕ ಸ್ವಾಮೀಜಿ ಮೇಲೆ ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗರಂ ಆಗಿದ್ಧಾರೆ.

ತರಳಬಾಳು ನಾಟಕೋತ್ಸವದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಶಿವಮೂರ್ತಿ ಶರಣರ ಪೋಕ್ಸೋ ಕೇಸ್​ ಪ್ರಸ್ತಾಪಿಸಿ ಗರಂ ಆಗಿದ್ಧಾರೆ.

ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ, ಮಾಧ್ಯಮಗಳಲ್ಲಿ ಬರ್ತಿರುವ ಮಾಹಿತಿ ನೋಡಿ ನಾಚಿಕೆ ಆಗ್ತಿದೆ, ನಮ್ಮ ಹೆಣ್ಣು ಮಕ್ಕಳು ಕೂಡಾ ಎಚ್ಚರಿಕೆ ವಹಿಸಬೇಕು. ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ನಿನ್ನೆ ಮಾಜಿ ಸಿಎಂ ಬಿಎಸ್​ವೈ ಕೂಡಾ ಶ್ರೀಗಳಿಗೆ ಶಿಕ್ಷೆಯಾಗಲಿ ಎಂದಿದ್ದರು.