ಸಾರ್ವಜನಿಕರೇ ಗಮನಿಸಿ : ಇಂದು 'ಕರಡು ಮತದಾರರ ಪಟ್ಟಿ' ಪ್ರಕಟ, ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿಕೊಳ್ಳಿ

ಸಾರ್ವಜನಿಕರೇ ಗಮನಿಸಿ : ಇಂದು 'ಕರಡು ಮತದಾರರ ಪಟ್ಟಿ' ಪ್ರಕಟ, ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿಕೊಳ್ಳಿ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗದಿಂದ ಇಂದು ಕರಡು ಮತದಾರರ ಪಟ್ಟಿಯನ್ನು

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಚುನಾವಣಾ ಆಯೋಗವು (, ಸಾರ್ವಜನಿಕರು ದಿನಾಂಕ 09-11-2022ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯನ್ನು ಪರೀಕ್ಷಿಸಿಕೊಳ್ಳಿ. ಹೆಸರು ಇಲ್ಲದೇ ಇದ್ದರೇ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿ ಎಂದು ತಿಳಿಸಿದೆ.

ಇನ್ನೂ ಮತದಾರರ ಪಟ್ಟಿಯಲ್ಲಿ ಏನಾದರೂ ತಪ್ಪುಗಳಿದ್ದರೇ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಹೆಸರು ತೆಗೆದುಹಾಕಲು ಅಥವಾ ವರ್ಗಾವಣೆ ಮಾಡಲು ಸಂಬಂಧ ಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ಅವಶ್ಯಕವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದೆ.

ಇದಲ್ಲದೇ Voter Helpine App ಅಥವಾ www.nvsp.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ದಿನಾಂಕ 09-11-2022ರ ನಾಳೆ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಬಗ್ಗೆ ಆಕ್ಷೇಪಣೆಗಳನ್ನು 08-12-2022ರೊಳಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.