ಕಾಂಗ್ರೆಸ್‌ ಪಕ್ಷಕ್ಕೆ ಇಟಲಿ ರಾಣಿಯೇ ಬಂಡವಾಳವಾದರೆ ಬಿಜೆಪಿಗೆ ಮಣ್ಣಿನ ಮಗ; ಸಿ.ಟಿ ರವಿ

ಕಾಂಗ್ರೆಸ್‌ ಪಕ್ಷಕ್ಕೆ ಇಟಲಿ ರಾಣಿಯೇ ಬಂಡವಾಳವಾದರೆ ಬಿಜೆಪಿಗೆ ಮಣ್ಣಿನ ಮಗ; ಸಿ.ಟಿ ರವಿ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಇಟಲಿ ರಾಣಿಯೇ ಬಂಡವಾಳವಾದರೆ ಬಿಜೆಪಿಗೆ ಮಣ್ಣಿನ ಮಗ , ಬಡ ಕುಟುಂಬದಿಂದ ಬಂದ ವ್ಯಕ್ತಿ ಸದಾ ಬಡಜನರು, ದೇಶಕ್ಕಾಗಿ ಶ್ರಮಿಸುವ , 20 ವರ್ಷಗಳಿಂದ ಒಂದೇ ಒಂದು ಹಗರಣವಿಲ್ಲದ ಪ್ರಧಾನಿ ಮೋದಿಯವರೇ ಬಂಡವಾಳ ಎಂದು ಟಾಂಗ್‌ ಕೊಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಾವುದೇ ಹಗರಣವಿಲ್ಲದೆ ಪ್ರಧಾನಿ ಮೋದಿಯವರು ಅಧಿಕಾರ ನಡೆಸಿಕೊಂಡು ಬಂದಿದ್ದಾರೆ.

ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್‌ ನವರು ಬೇಕಿದ್ದರೆ ಬಂಡವಾಳ ಮಾಡಿಕೊಂಡು ಪ್ರಧಾನಿ ಮೋದಿಯವರನ್ನು ಕೊಂಡಾಡಲಿ ಎಂದು ಹೇಳಿದ್ದಾರೆ.
ರಾಮನ ಹೆಸರು ಬರೆದು ಹಾಕಿದರೆ ಮುಳುಗುವ ಕಲ್ಲು ತೇಲುತ್ತಿತ್ತಂತೆ ಹಾಗೇ ಮೋದಿ ಹೆಸರನ್ನು ಹೇಳಿ ಮುಳುಗತ್ತಿರುವ ಕಾಂಗ್ರೆಸ್‌ ನವರು ತೇಲಲಿ ಎಂದು ಹೇಳಿದ್ದಾರೆ.